ಇದು ಶಾದಿ ಡಾಟ್​.ಕಾಮ್​ನ ವಂಚನೆ ಪ್ರಕರಣ-ಮೊದಲನೇ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾದ ಭೂಪ!

 

ad


ಶಾದಿ ಡಾಟ್ ಕಾಮ್ ವೆಬ್ ಸೆಟ್ ನಲ್ಲಿ ವದು – ವರನನ್ನ ಹುಡುಕುತ್ತಿದ್ರೆ ಮೊದಲು ನಾವು ಹೇಳೋ ಸ್ಟೋರಿಯನ್ನ ಒಮ್ಮೆ ನೋಡಿ. ಮದುವೆಯಾಗಿ ಒಂದು ಮಗು ಇದ್ರೂ ಶಾದಿ ಡಾಟ್ ಕಾಮ್ ವೆಬ್ ಸೆಟ್ ನಲ್ಲಿ ಟೆಕ್ಕಿಯೊಬ್ಬ ತನಗೆ ಮದುವೆನೆ ಆಗಿಲ್ಲ ಅಂತ ಹೇಳಿ ಟೆಕ್ಕಿಯೊಬ್ಬಳಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರಿನ ಹೆಚ್.ಎಸ್.ಆರ್ .ಲೇಔಟ್ ನಲ್ಲಿ ನಡೆದಿದೆ.

 

ನಿಶಾ ಮೋಸ ಹೋದ ಮಹಿಳೆ. ಸುನೀಲ್ ಜಿವ್ನಾನಾನಿ ಎಂಬುವನೇ ಮೋಸ ಮಾಡಿದ ಕಿರಾತಕ. ಶಾದಿ ಡಾಟ್ ಕಾಮ್ ಮೂಲಕ ನಿಶಾಳನ್ನ ಪರಿಚಯ ಮಾಡಿಕೊಂಡ ಸುನೀಲ್ ತನಗೆ ಮದುವೆನೆ ಆಗಿಲ್ಲ ಅಂತ ನಂಬಿಸಿ ನಿಶಾಳನ್ನ ಮದುವೆಯಾಗಿ ನಂತರ ಅವಳ ಬಳಿ ಲಕ್ಷಾಂತರ ರೂಪಾಯಿ ಹಣ ಪೀಕಿ ಈಗ ನಡು ನೀರಲ್ಲಿ ಕೈ ಬಿಟ್ಟಿದ್ದಾನೆ. ಅಲ್ಟಿ ಸೋರ್ಸ್ ಬೆಂಗಳೂರು ಇಕೋಸೆಪ್ಸ್ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ಸುನೀಲ್ ಮೂಲತಹ ಅಹಮದಾಬಾದ್ ನವನು.ಜಯಬಂಭಾನಿ ಎಂಬುವಳ ಜೊತೆ ಈಗಾಗಲೇ ಮದುವೆಯಾಗಿದ್ದು ಅವಳಿಗೆ ಒಂದು ಹೆಣ್ಣು ಮಗು ಕರುಣಿಸಿ ಅವಳಿಗೂ ವಂಚನೆ ಮಾಡಿ ನಂತರ ನಿಶಾಳನ್ನ 2017 ರಲ್ಲಿ ಮದುವೆಯಾಗಿ ಈಗ ಅವಳಿಗೂ ವಂಚಿಸಿರೋದು ಬೆಳಕಿಗೆ ಬಂದಿದೆ. ಸದ್ಯ ನಿಶಾ ಹೆಚ್.ಎಸ್.ಆರ್ .ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.