ಲಾಡೆನ್ ನಮ್ಮ ದೇವರು !! ಭಯೋತ್ಪಾದನೆಗೆ ಕೈ ಜೋಡಿಸಬೇಕಂತೆ ಶೆಟ್ಟರ್ !!

ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ್​​ ಶೆಟ್ಟರ್​​ಗೆ ಜೀವ ಬೆದರಿಕೆ ಬಂದಿದ್ದು,

ಮೆಸೆಜ್​ ಮೂಲಕ ಪ್ರದೀಪ್​ ಶೆಟ್ಟರನ್ನು ಅನಾಮಿಕ ವ್ಯಕ್ತಿಯೊಬ್ಬ ಬೆದರಿಸಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಈ ಸಂದೇಶ ಬಂದಿದ್ದು, ಪ್ರದೀಪ ಶೆಟ್ಟರ್ ಕುಟುಂಬದಲ್ಲಿ ಆತಂಕ ಮೂಡಿಸಿದೆ. ವಿಧಾನಪರಿಷತ್​ ಸದಸ್ಯ ಪ್ರದೀಪ್​ಗೆ ಬೆದರಿಕೆ ಬಂದಿದ್ದು, ದೂರವಾಣಿ ಸಂಖ್ಯೆ 9071457559 ನಂಬರ್​​​ನಿಂದ ಟೆಕ್ಸ್ಟ್​ ಬಂದಿದೆ. ಉಗ್ರಗಾಮಿಗಳ ಜತೆ ಕೈಜೋಡಿಸಿ ಎಂಬ ಸಂದೇಶ ರವಾನಿಸಲಾಗಿದೆ. ಇದೀಗ ಮೆಸೆಜ್​ನ್ನು ಗಂಭೀರವಾಗಿ ಪರಿಗಣಿಸಿರುವ ಪ್ರದೀಪ ಶೆಟ್ಟರ್ ಇಂದು ಸ್ಥಳೀಯ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.