ಸಿದ್ದರಾಮಯ್ಯನವರು ಶೀಲಭಾಗ್ಯ ಕೊಟ್ರಾ? – ಜಮೀರ್ ಖಾನ್ ಏನಂದ್ರು?

ಅನ್ಯಭಾಗ್ಯ, ಶೀಲಭಾಗ್ಯ ಅಂತ ಜಮೀರ್ ಭಾಷಣ

ಸಿದ್ದರಾಮಯ್ಯನವರ ಸರ್ಕಾರದ ಯೋಜನೆಗಳನ್ನು ಹೊಗಳುವ ಭರಾಟೆಯಲ್ಲಿ ಶಾಸಕ ಜಮೀರ್​ ಅಹಮದ್​ ಖಾನ್ ಎಡವಟ್ಟು ಮಾಡಿದ್ದಾರೆ.

ನಾಗಮಂಗಲದ ಬೆಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಸಿದ್ದರಾಮಯ್ಯನವರು ಕೊಟ್ಟ ಭಾಗ್ಯಗಳಲ್ಲಿ ಅನ್ಯಭಾಗ್ಯ, ಶೀಲಭಾಗ್ಯ, ಶೂಭಾಗ್ಯಗಳನ್ನು ಕೊಟ್ಟಿದ್ದಾರೆ ಅಂತ ವೇದಿಕೆಯಲ್ಲಿ ಹೇಳಿದರು. ಅನ್ನಭಾಗ್ಯ, ಕ್ಷೀರಭಾಗ್ಯ ಅನ್ನುವ ಬದಲಾಗಿ ಅನ್ಯಭಾಗ್ಯ ಶೀಲಭಾಗ್ಯ ಅಂತ ಹೇಳಿ ಎಡವಟ್ಟು ಮಾಡಿಕೊಂಡರು.  ಅವರ ಮಾತಿನ ಭರಾಟೆ ಹೇಗಿತ್ತು ನೀವೇ ನೋಡಿ