ಅತ್ತ ಅಧಿಕಾರ ಉಳಿಸಲು ಬಿಜೆಪಿ ಸರ್ಕಸ್​- ಇತ್ತ ರೆಡ್ಡಿ ಕಾಂಗ್ರೆಸ್​​​ ಶಾಸಕರಿಗೆ ಒಡ್ಡಿದ ಆಮಿಷದ ಆಡಿಯೋ ರಿಲೀಸ್​- ಕೋಟಿ ಕೋಟಿ ಬಿಕರಿಯಾಗ್ತಿದ್ದಾರಾ ಶಾಸಕರು?

ಸರ್ಕಾರ ಉಳಿಸಿಕೊಳ್ಳುವ ಬಿಜೆಪಿಯ ಕನಸಿಗೆ ಕಾಂಗ್ರೆಸ್​ ತಣ್ಣಿರು ಎರಚಿದೆ. ಹೌದು ಅತ್ತ ಬಿಜೆಪಿ ಸರ್ಕಾರ ಉಳಿಸಿಕೊಳ್ಳಲು ಸರ್ಕಸ್​ ಆರಂಭಿಸಿದ್ದರೇ ಇತ್ತ ಕಾಂಗ್ರೆಸ್​​ ನಾಯಕರು ಬಿಜೆಪಿಯ ಮಾನಸಪುತ್ರನಂತಿರುವ ರೆಡ್ಡಿ ಕಾಂಗ್ರೆಸ್​​ ಎಮ್​ಎಲ್​ಎಗಳ ಜೊತೆ ನಡೆಸಿದ್ದಾರೆ ಎನ್ನಲಾದ ಮಾತುಕತೆಯ ಆಡಿಯೋ ಬಿಡುಗಡೆ ಮಾಡಿದ್ದು, ಬಿಜೆಪಿ ಕಂಗಾಲಾಗಿದೆ.
ಕಾಂಗ್ರೆಸ್​ ನ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ್ ಬಳಿ ಜನಾರ್ಧನ್ ರೆಡ್ಡಿ ನಡೆಸಿರುವ ಮಾತುಕತೆಯ ಆಡಿಯೋವನ್ನು ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋ ದಲ್ಲಿ ಜನಾರ್ಧನ ರೆಡ್ಡಿ ಬಸನಗೌಡ್ ಮನವೊಲಿಸುವ ಪ್ರಯತ್ನ ನಡೆಸಿದ್ದು, ಬಿಜೆಪಿ ಸೇರಿದರೇ ನೀವು ಬಯಸಿದಂತೆ ಇರಬಹುದು ಎಂದೆಲ್ಲ ಆಮಿಷ ಒಡ್ಡಿದ್ದಾರೆ.

 

ಅಲ್ಲದೇ ಈ ಹಿಂದೆ ನಡೆದ ಬಿಎಸ್​ಆರ್​ ಕಾಂಗ್ರೆಸ್​ ಸ್ಥಾಪನೆ ಸೇರಿದಂತೆ ಹಲವು ವಿಚಾರಗಳನ್ನು ರೆಡ್ಡಿ ಮಾತಿನ ಮಧ್ಯೆ ಪ್ರಸ್ತಾಪಿಸಿದ್ದಾರೆ. ಇನ್ನು ಆಡಿಯೋ ಬಿಡುಗಡೆಯ ಬಳಿಕ ವಾಗ್ದಾಳಿ ನಡೆಸಿದ ಕಾಂಗ್ರೆಸ್​ ನಾಯಕರು, ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇವಲ ರೆಡ್ಡಿ ಮಾತ್ರವಲ್ಲ ಅಮಿತ್ ಶಾ ಕೂಡ ನಮ್ಮ ಶಾಸಕರಿಗೆ ಆಮಿಷ ಒಡ್ಡಿದ್ದು, ಇದರ ಆಡಿಯೋವನ್ನು ಸಧ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ. ಇನ್ನು ಈ ಬೆಳವಣಿಗೆ ನಿಜಕ್ಕೂ ಬಿಜೆಪಿ ಮುಜುಗರ ತಂದಿರೋದಂತು ನಿಜ.