ಲಿಂಗಾಯತ ಪ್ರತ್ಯೇಕ ಧರ್ಮ ಸಭೆಯಲ್ಲಿ ಭುಗಿಲೆದ್ದ ಉಪ ಕದನ
ಉಪಜಾತಿ ಮೂಲಕ ಮುಖಂಡರ ಸ್ವಾಗತಕ್ಕೆ ತೀವ್ರ ಆಕ್ರೋಶ
ಬಣಜಿಗ ಸೇರಿದಂತೆ ಉಪ ಜಾತಿ ಹೆಸರು ಕರೆದಿದ್ದಕ್ಕೆ ಆಕ್ಷೇಪ
ಉಪಜಾತಿಗಳ ಪ್ರಸ್ತಾಪ ಬೇಡವೆಂದು ಸಭಿಕರಿಂದ ಆಗ್ರಹ
ಉಪ ಜಾತಿ ಆಕ್ರೋಶಕ್ಕೆ ತಬ್ಬಿಬ್ಬಾದ ಸಂಘಟಕರು
ಸಂಘಟಕರನ್ನು ಗದರಿದ ಇಳಕಲ್ಲು ಮಹಾಂತಪ್ಪ ಸ್ವಾಮೀಜಿ

ಧರ್ಮ ಸಭೆಯಲ್ಲಿ ಉಪ ಆಕ್ರೋಶ
=======

ಚಿತ್ರದುರ್ಗದ ಮುರುಘಾ ಶರಣರು, ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಇಳಕಲ್ ಮಹಾಂತಪ್ಪಗಳು, ಗದಗ್ ತೊಂಟದ ಸಿದ್ದಲಿಂಗ ಶ್ರೀಗಳು, ಧಾರವಾಡ ಮೂರುಘಾ ಮಠ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಎರನಾಳ ವಿರಕ್ತಮಠದ ಶ್ರೀಗಳು, ಅಲ್ಲಂ ವೀರಭದ್ರಪ್ಪ, ಪ್ರಮೀಳಾ ನೇಸರ್ಗಿ, ವೀರಣ್ಣ ಮತ್ತಿಕಟ್ಟಿ, ಡಿ ಬಿ ಇನಾಂದಾರ್, ಎಂ ಬಿ ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ಪ್ರಕಾಶ್ ಹುಕ್ಕೇರಿ, ವಿನಯ್ ಕುಲಕರ್ಣಿ, ಅಶೋಕ್ ಪಟ್ಟಣ, ವೀರಣ್ಣ ರಾಜೂರ್, ಡಾ. ಎನ್ ಜಿ ಮಹದೇವಪ್ಪ, ರಂಜಾನ್ ದರ್ಗಾ ಸೇರಿದಂತೆ ಹಲವರ ಉಪಸ್ಥಿತಿ

ಲಿಂಗಾಯತ ಸ್ವತಂತ್ರ ಧರ್ಮ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಹಾಡೋ ಪ್ರಯತ್ನ ಶುರುವಾಗಿದೆ. ಇವತ್ತು ಬೆಂಗಳೂರಿನ ಸೆಂಟ್ರಲ್​​ ಕಾಲೇಜು ಜ್ಞಾನಜ್ಯೋತಿ ಸಭಾಂಗಣದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ವಿಚಾರ ಕುರಿತು ಚಿಂತನ-ಮಂಥನ ಆರಂಭವಾಗಿದೆ. ಸಭೆಯಲ್ಲಿ ಚಿತ್ರದರ್ಗದ ಶ್ರೀ ಮುರುಘರಾಜೇಂದ್ರ ಶರಣರು, ಗದಗದ ತೊಂಟದ ಶ್ರೀಗಳು, ಬೇಲಿ ಮಠದ ಶಿವರುದ್ರ ಸ್ವಾಮೀಜಿ ಸೇರಿದಂತೆ 150ಕ್ಕೂ ಹೆಚ್ಚು ಮಠಾದೀಶರು, ಚಿಂತಕರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
======
ಸಚಿವರಾದ ಎಂಬಿ ಪಾಟೀಲ್​​​, ಶರಣಪ್ರಕಾಶ ಪಾಟೀಲ್​​, ವಿನಯ್​​ ಕುಲಕಣ
ಲಿಂಗಾಯತ ಸ್ವತಂತ್ರ ಧರ್ಮ ಸಮರಕ್ಕೆ ಇವತ್ತು ನಿರ್ಣಾಯಕ ದಿನವಾಗಿದೆ. ಬೆಂಗಳೂರಿನಲ್ಲಿ ಸ್ವತಂತ್ರ ಸಮರದ ಮಹತ್ವದ ಸಮಾಲೋಚನೆ ನಡೆಯುತ್ತಿದ್ದು, 150ಕ್ಕೂ ಹೆಚ್ಚು ಮಠಾದೀಶರು, ಚಿಂತಕರು ಲಿಂಗಾಯತ ಧರ್ಮ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಬೆಂಗಳೂರು ವಿವಿಯ ಸೆಂಟ್ರಲ್​​ ಕಾಲೇಜು ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಭೆ ಆರಂಭವಾಗಲಿದೆ. ಸಮಾರು 100ಕ್ಕೂ ಹೆಚ್ಚು ಹಿರಿ-ಕಿರಿಯ ಸ್ವಾಮೀಜಿಗಳು ಭಾಗವಹಿಸುವ ಸಾಧ್ಯತೆ ಇದ್ದು, ಚಿತ್ರದುರ್ಗದ ಶ್ರೀ ಮುರುಘಾಶರಣರು, ಗದಗದ ತೋಂಟದ ಶ್ರೀ, ಡಾ. ಶಿವಮೂರ್ತಿ ಶಿವಾಚಾರ್ಯರು, ಸಿರಿಗೆರೆ ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮೀಜಿ, ಕೂಡಲ ಸಂಗಮ ಶ್ರೀ ಸಿದ್ದರಾಮಯ ಮಹಾಸ್ವಾಮಿ, ನಾಗನೂರು, ಬೆಳಗಾವಿ
ಡಾ. ಬಸವಲಿಂಗ ಪಟ್ಟದ್ದೇವರು, ಭಾಲ್ಕಿ , ಡಾ.ಮಹಾಂತಪ್ಪ ಶ್ರೀ, ಇಳಕಲ್​
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘಾಮಠ, ಧಾರವಾಡದ ಡಾ. ಮಹದೇವಪ್ಪ, ಡಾ. ಶಿವಾನಂದ ಜಾಮದಾರ , ಡಾ. ವೀರಣ್ಣ ರಾಜೂರ
ರಂಜಾನ್​ ದರ್ಗಾ ಸೇರಿ ಹಲವು ವಿದ್ವಾಂಸರು ಭಾಗಿಯಾಗಲಿದ್ದಾರೆ. ಇದಕ್ಕೆ
ಸಚಿವರಾದ ಎಂ. ಬಿ. ಪಾಟೀಲ್​, ವಿನಯ್​ ಕುಲಕರ್ಣಿ ಸಾಥ್​​ ನೀಡಲಿದ್ದಾರೆ.

ಈಗಾಗಲೇ ಸುಮಾರು ದಿನಗಳಿಂದ ವೀರಶೈವ ಹಾಗೂ ಲಿಂಗಾಯತ ಸಮಾಜ ವಿವಾದದ ಬಗ್ಗೆ ಹಲವೆಡೆ ಚರ್ಚೆಗಳಾಗುತ್ತಿವೆ.. ಇದಕ್ಕೆ ಹಲವು ಮಠಾಧೀಶರಿಂದ ಪರ ಹಾಗೂ ವಿರೋಧದ ಮಾತುಗಳು ಕೂಡಾ ಕೇಳಿ ಬರ್ತಿರೋದ್ರಿಂದ ಈ ವಿಚಾರ ಕುರಿತಂತೆ ಇಂದು ಲಿಂಗಾಯತ ಧರ್ಮ ಸಮಾಲೋಚನಾ ಸಭಾವತಿಯಿಂದ ಇಂದು ಮಹತ್ವದ ಸಭೆ ಆಯೋಜಿಸಲಾಗಿದೆ. ಬೆಂಗಳೂರು ವಿವಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಈ ಸಭೆಯಲ್ಲಿ ಮಠಾಧೀಶರು, ಲಿಂಗಾಯತ ಸಮಾಜದ ಮುಖಂಡರು ಹಾಗೂ ಅನೇಕ ಚಿಂತಕರು ಭಾಗಿಯಾಗಲಿದ್ದಾರೆ.. ಈ ಸಭೆ ಬಹಳ ಪ್ರಮುಖವಾಗಿದ್ದು, ಈ ವಿಚಾರದ ಕುರಿತು ಇವತ್ತು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ..
===================

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here