ಶಾಸಕರನ್ನು ಉಳಿಸಿಕೊಳ್ಳಲು ಜೆಡಿಎಸ್​ ಮಾಸ್ಟರ್​ ಪ್ಲ್ಯಾನ್​! ರೆಸಾರ್ಟ್​ನಲ್ಲಿ ದಳಪತಿಗಳ ಮೇಲೆ ವಿಶೇಷ ನಿಗಾ!!

ಕರ್ನಾಟಕ ರಾಜ್ಯ ರಾಜಕಾರಣ ದೇಶದೆಲ್ಲೆಡೆ ಭಾರೀ ಕುತೂಹಲ ಮೂಡಿಸಿದ್ದು, ಮೈತ್ರಿ ಪಕ್ಷದ ಅತೃಪ್ತ ಶಾಸಕರು ಮುಂಬೈನಲ್ಲಿ ಕುಳಿತು ಸರ್ಕಾರ ಉರುಳಿಸಲು ಪ್ಲಾನ್ ನಡೆಸ್ತಿದ್ರೆ, ಇತ್ತ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕರು ಸರ್ಕಾರ ಉಳಿಸುಕೊಳ್ಳುವಲ್ಲಿ ರಣತಂತ್ರ ರೂಪಿಸುತ್ತಿದ್ದಾರೆ.

ad

 

ಜೆಡಿಎಸ್​ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ದೇವನಹಳ್ಳಿಯ ನಂದಿಹಿಲ್ಸ್ ಬಳಿಯಿರೋ ಗಾಲ್ಫ್​ಶೈರ್​ ರೆಸಾರ್ಟ್​ನಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಜೆಡಿಎಸ್ ಶಾಸಕರಿಗಾಗಿ ಶಾಸಕ ನಿಸರ್ಗ ನಾರಾಯಣಸ್ವಾಮಿ 34 ರೂಂಗಳನ್ನ ಬುಕ್ ಮಾಡಿದ್ರು. ಕಳೆದ ರಾತ್ರಿಯೇ ರೆಸಾರ್ಟ್​ ತಲುಪಿರೋ ಶಾಸಕರು ಪಕ್ಷದ ನಾಯಕರ ಸೂಚನೆಯಂತೆ ನಡೆದುಕೊಳ್ಳಲಿದ್ದಾರೆ. ರೆಸಾರ್ಟ್​​ಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

 

ಈಗಾಗಲೇ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್​- ಜೆಡಿಎಸ್​ ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ್ದು.ಇಂದು ವಿಧಾನಸೌಧಲ್ಲಿ ಸಿಎಲ್​ಪಿ ಸಭೆ ಕರೆಯಲಾಗಿದೆ. ಮುಂದಿನ ಬೆಳವಣಿಗೆಗಳ ಬಗ್ಗೆ ಭಾರೀ ಕುತೂಹಲ ಮೂಡಿದೆ.ಇಂದು ರಾಜ್ಯ ಸರ್ಕಾರದ ಅಳಿವು ಉಳಿವು ನಿರ್ಧಾರವಾಗಲಿದೆ. ಹಾಗಾಗಿ ಆ ಬಗ್ಗೆ ವೇಣುಗೋಪಾಲ್​ ಜೊತೆ ಸಿಎಂ ಸಭೆ ನಡೆಸಿದ್ದಾರೆ. ದೋಸ್ತಿ ನಾಯಕರ ಮುಂದಿರುವ ಸಾಧ್ಯತೆಗಳ ಬಗ್ಗೆ, ಕೊನೆ ಕ್ಷಣದಲ್ಲಿ ಅತೃಪ್ತ ಶಾಸಕರು ಕೈಕೊಟ್ಟಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.