ಲೋಕ ಅಖಾಡಕ್ಕೆ ಭರ್ಜರಿ ಎಂಟ್ರಿ : ನಿಖಿಲ್ ಗೆ ರಾಜಕೀಯ ಅಭಿಷೇಕ

ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್​ನಲ್ಲಿ ಜೆಡಿಎಸ್​ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿರುವ ಬೃಹತ್​ ವೇದಿಕೆ ಸಮಾವೇಶದಲ್ಲಿ ಜೆಡಿಎಸ್​ ವರಿಷ್ಠ ಇಚ್ಛೆಯಂತೆ ನಿಖಿಲ್​ ಕುಮಾರಸ್ವಾಮಿ ಮೈತ್ರಿ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಸಚಿವ ಡಿಸಿ ತಮ್ಮಣ್ಣ ಘೋಷಣೆ ಮಾಡಿದ್ದಾರೆ.

ಜ್ಯೋತಿಷಿಗಳ ಸಲಹೆಯ ಮೇರೆಗೆ ನಿಗದಿತ ಸಮಯಕ್ಕೆ ನಿಖಿಲ್​ ಹೆಸರನ್ನು ಸಚಿವರು ಘೋಷಣೆ ಮಾಡಿದರು. ಘೋಷಣೆ ಮಾಡುವ ಸಮಯದಲ್ಲಿ ಇನ್ನೂ ವೇದಿಕೆಗೆ  ಕುಮಾರಸ್ವಾಮಿಯಾಗಲಿ, ದೇವೇಗೌಡರಾಗಲಿ ಬಂದಿರಲಿಲ್ಯಾಲ.   ಈ ಹಿನ್ನೆಲೆಯಲ್ಲಿ 12 ಗಂಟೆಯೊಳಗೆ ನಿಖಿಲ್​ ಹೆಸರು ಘೋಷಣೆಗೆ  ಶುಭ ಗಳಿಗೆಯನ್ನು ಫಿಕ್ಸ್ ಮಾಡಲಾಗಿತ್ತು. ದೇವೇಗೌಡರ ಅನುಮತಿಯಲ್ಲಿ ಸಚಿವರೇ ಹೆಸರು ಘೋಷಣೆ ಮಾಡಿದರು.

ನಿಖಿಲ್​ ಕುಮಾರಸ್ವಾಮಿ ಈ ಕ್ಷೇತ್ರದ ಮಗ. ಅವರನ್ನು ಗೆಲ್ಲಿಸುವ ಹೊಣೆ ನಮ್ಮದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಮಾತಿಗೆ ತಲೆ ಕೆಡಿಸಿಕೊಳಬೇಡಿ. ಕ್ಷೇತ್ರಕ್ಕೆ ಈಗಾಗಲೇ ಕುಮಾರಸ್ವಾಮಿಯವರು ಬಜೆಟ್​ನಲ್ಲಿ ಅನೇಕ ಅನುದಾನ ನೀಡಿದ್ದಾರೆ. ಇದಕ್ಕೆ ಕಾರಣ ಕ್ಷೇತ್ರದಲ್ಲಿ ನೀವು ಜೆಡಿಎಸ್​ ನಾಯಕರನ್ನು ಆರಿಸಿಕಳುಹಿಸಿರುವುದು. ಶಾಸಕರನ್ನು ಆರಿಸಿಕಳುಹಿಸಿದಂತೆ ಈಗ ನಿಖಿಲ್​ ಗೆಲ್ಲಿಸುವ ಜವಬ್ದಾರಿ ನಿಮ್ಮ ಮೇಲಿದೆ ಎಂದರು.