ಶ್ರೀಲಂಕಾ ದಾಳಿಯಲ್ಲಿ ಜೆಡಿಎಸ್​ ಮುಖಂಡ ರಮೇಶ್​ಗೌಡ ಸಾವು!!

ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನದಂದೇ 3 ಚರ್ಚ್​​ಗಳು ​, 3 ಹೋಟೆಲ್​ಗಳು​ ಹಾಗೂ ಸಾರ್ವಜನಿಕ ಸ್ಥಳಗಳೂ ಸೇರಿ ಒಟ್ಟು 8 ಕಡೆಗಳಲ್ಲಿ ಭಯೋತ್ಪಾದಕರು ಬಾಂಬ್​ ಬ್ಲಾಸ್ಟ್ ನಡೆಸಿದ್ದಾರೆ. ಈ ದಾಳಿಯಲ್ಲಿ ಶ್ರೀಲಂಕಾಕ್ಕೆ ಪ್ರವಾಸಕ್ಕೆಂದು ತೆರಳಿದ್ದ  ತುಮಕೂರಿನ ಜೆಡಿಎಸ್​ ಮುಖಂಡ ರಮೇಶ್​ಗೌಡ ಕೂಡಾ ಸಾವನ್ನಪ್ಪಿದ್ದಾರೆ.

ad

ಕ್ವಾಲಿಟಿ ಬಾರ್ ಆಂಡ್ ರೆಸ್ಟೋರೆಂಟ್‌ ಮಾಲೀಕರಾಗಿರುವ ರಮೇಶ್​ ಗೌಡ ಕಳೆದ ಶನಿವಾರ ಚುನಾವಣಾ ಪ್ರಚಾರ ಹಾಗೂ ಮತದಾನದ ಬಳಿಕ  ಶ್ರೀಲಂಕಾಗೆ ತೆರಳಿದ್ದರು.ಈ ವೇಳೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದು, ಕುಟುಂಬಸ್ಥರು ಶೋಕದಲ್ಲಿ ಮುಳುಗಿದ್ದಾರೆ.

ತುಮಕೂರಿನ ಸರಸ್ವತಿಪುರಂನಲ್ಲಿರುವ ಅವರ ನಿವಾಸಕ್ಕೆ ಸ್ಥಳೀಯ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳ್ತಿದ್ದಾರೆ. ತುಮಕೂರು ಬಿಜೆಪಿ ಶಾಸಕ ಜ್ಯೋತಿ ಗಣೇಶ್​ , ರಮೇಶ್ ಗೌಡ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದರು. ಇದುವರೆಗೂ ಆತ್ಮಾಹುತಿ ಬಾಂಬ್​​​​ ಸ್ಫೋಟದಲ್ಲಿ ಮೂವರು ಭಾರತೀಯರು, 27 ಮಂದಿ ವಿದೇಶೀಯರು ಸೇರಿದಂತೆ ಈವರೆಗೆ 215 ಮಂದಿ ಮೃತಪಟ್ಟಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.