ಜೆಡಿಸ್ ಪ್ರಚಾರಕ್ಕೆ ವಿಶೇಷ ವಾಹನ!! ಪ್ರಜ್ವಲ ರೇವಣ್ಣರ ಈ ವಾಹನ ಹೇಗಿದೆ ಗೊತ್ತಾ?

ಇಡೀ ದೇಶವೇ, ರಾಜ್ಯ ವಿಧಾನಸಭಾ ಚುನಾವಣೆಯನ್ನ ತಿರುಗಿ ನೋಡುತ್ತಿದ್ದು, ಜೆಡಿಎಸ್ ಮತ ಪ್ರಚಾರಕ್ಕಾಗಿ ವಿಶೇಷ ವಾಹನ ಸಿದ್ದಪಡಿಸಿದೆ.. ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣರವರು ನಾಳೆಯಿಂದ ವಿಶೇಷ ವಾಹನದಲ್ಲಿ ಮತಪ್ರಚಾರ ಮಾಡಲಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಈ ವಿಶೇಷ ವಾಹನವನ್ನ ಇರಿಸಲಾಗಿದ್ದು, ನಾಳೆಯಿಂದ ಅಧಿಕೃತವಾಗಿ ವಿಶೇಷ ವಾಹನಕ್ಕೆ ಚಾಲನೆ ನೀಡಲಿದ್ದಾರೆ.

ad


ನಾಳೆ ವಾಹನಕ್ಕೆ ಪೂಜೆ ಸಲ್ಲಿಸಿದ ನಂತರ ರಾಜ್ಯಾದ್ಯಂತ ಮತಪ್ರಚಾರ ಆರಂಭಿಸಲಾಗುತ್ತದೆ‌. ಇಡೀ ವಾಹನವನ್ನ ಹಸಿರುಮಯ ಮಾಡಲಾಗಿದ್ದು, ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡರ, ಮಾಜಿ ಸಿಎಂ ಕುಮಾರಸ್ವಾಮಿರವರ ಭಾವಚಿತ್ರವುಳ್ಳ ವಾಹನವನ್ನ ಸಿದ್ದಪಡಿಸಲಾಗಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ವಿಶೇಷ ವಾಹನ ಸಿದ್ದಪಡಿಸಿದ್ದು, ಸುಮಾರು 20 ಲಕ್ಷ ವೆಚ್ಚದಲ್ಲಿ ವಾಹನ ಸಿದ್ದಪಡಿಸಲಾಗಿದೆ.


ಈ ವಾಹನವನ್ನು ಪ್ರಜ್ವಲ್ ರ ಅಮ್ಮ ಭವಾನಿ ರೇವಣ್ಣರವರು ಈ ವಾಹನವನ್ನು ಕೊಡುಗೆ ನೀಡಿದ್ದಾರೆ. ಈ ಬಗ್ಗೆ ನಮ್ಮ ಹಾಸನ ಪ್ರತಿನಿಧಿ ನಿಂಗರಾಜ್ ಬೆಳವಾಡಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ ನೋಡಿ,,,,