ಕಾರವಾರದ ಕೈಗಾ ಅಣುಸ್ಥಾವರ ನಮಗೆ ನೀಡುತ್ತಿರುವ ಕೊಡುಗೆ ಏನು? ಈ ಕೊಡುಗೆಯ ವಿಷಯ ಜನರು ಆತಂಕಗೊಂಡಿದ್ಯಾಕೆ?

ರಾಜ್ಯಕ್ಕೆ ವಿದ್ಯುತ್ ನೀಡಿ ಹೆಗ್ಗಳಿಕೆಗೆ ಪಾತ್ರವಾಗಬೇಕಾಗಿದ್ದ ಅಣು ವಿದ್ಯುತ್ ಸ್ಥಾವರ ಇಂದು ಅಲ್ಲಿನ ಜನರಿಗೆ ಕ್ಯಾನ್ಸರ್ ಎಂಬ ಮಾಹಾಮಾರಿ ರೋಗವನ್ನ ಗಿಪ್ಟ್ ಆಗಿ ನೀಡತ್ತಾ ಇದೆ. ಈ ಅಣು ಸ್ಥಾವರದ ವಿಕಿರಣದಿಂದಾಗಿ ದಿನದಿಂದ ದಿನಕ್ಕೆ ಆ ಭಾಗದಲ್ಲಿ ಕ್ಯಾನ್ಸ್ರರ್ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಆಗತ್ತಾನೆ ಇದೆ. ಒಂದ ಕಡೆ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳು ಇದು ತಮ್ಮಿಂದಾದ ಪ್ರಮಾದವಲ್ಲ ಅಂತಾ ಬೀಗುತ್ತಿದ್ದರೆ. ದಾಖಲೆಗಳು ಮಾತ್ರ ನಿಜ ಹೇಳ್ತಾ ಇದೆ. ಇದರಲ್ಲಿ ಸತ್ಯ ಯಾವದು ಸುಳ್ಳಾವುದು ಅನ್ನೋ ಸಂಪೂರ್ಣ ಡಿಟೇಲ್ಸ್ ಓಮ್ಮೆ ಓದಿ.

ad

 

ಕೈಗಾ ದೇಶದ ಪ್ರತಿಷ್ಟಿತ ವಿದ್ಯುತ್ ಯೋಜನೆಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿನ ಕೈಗಾ ರಾಜ್ಯದ ಏಕೈಕ ಅಣುವಿದ್ಯುತ್ ಸ್ಥಾವರ ಘಟಕ ಕೂಡ ಹೌದು. ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆ ಸಿಬ್ಬಂದಿಗಳು ನಡೆಸಿರೋ ದಾಖಲೆ ಇದೀಗ ಸೋರಿಕೆ ಆಗಿದೆ. ಇದ್ರಿಂದ ಅಲ್ಲಿನ ಜನ ಮತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ನಾಲ್ಕು ಘಟಕಗಳ ಮೂಲಕ ವಿದ್ಯುತ್ ತಯಾರಿಸುವ ಸ್ಥಾವರದಲ್ಲಿ ಪ್ರತಿ ಘಟಕದಲ್ಲಿ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನ ಮಾಡುವ ಸಾಮರ್ಥ್ಯವನ್ನ ಹೊಂದಿದೆ. ಕೈಗಾ ಸುತ್ತಮುತ್ತಲೂ ವಿಕಿರಣಗಳ ಪರಿಣಾಮದಿಂದ ಕ್ಯಾನ್ಸರ್ ಎನ್ನುವ ಮಾರಕ ಕಾಯಿಲೆ ಹರಡುತ್ತದೆ ಎನ್ನುವ ಆರೋಪ ಹಿಂದಿನಿಂದಲೂ ಅಲ್ಲಿನ ಜನರಿಂದ ಕೇಳಿ ಬರತ್ತಾ ಇತ್ತು.

 

ಈ ಬಗ್ಗೆ ಕೈಗಾ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆ
ಸಿಬ್ಬಂದಿಗಳು ಕೈಗಾ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಆರು ವರ್ಷದಿಂದ ಸರ್ವೆ ಕಾರ್ಯ ಮಾಡುತ್ತಿದ್ದಾರೆ. 2010 ರಿಂದ 13 ರ ವರೆಗೆ ನಡೆಸಿದ ಸರ್ವೆಯಲ್ಲಿ ಅದು ಕೈಗಾ ಸುತ್ತಮುತ್ತಲಿನ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಡೆಸಿದ ಸರ್ವೆ ವರದಿ ಇದೀಗ ಬೆಳಕಿಗೆ ಬಂದಿದೆ. 2010 ರಿಂದ 13 ರವರೆಗೆ ಸುಮಾರು 316 ಕ್ಯಾನ್ಸರ್ ರೋಗಿಗಳು ಪತ್ತೆಯಾಗಿದ್ದು ಈ ಹಿಂದೆಗಿಂತ ಕ್ಯಾನ್ಸರ್ ಹೆಚ್ಚಾದವರ ಪ್ರಮಾಣ ಶೇಕಡಾ 200ರಷ್ಟು ಏರಿಕೆ ಆಗಿದೆ ಅಂತಾ ತಿಳಿಸಲಾಗಿದೆ. ಕೈಗಾ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕವನ್ನ ಸೃಷ್ಟಿಮಾಡಿದೆ.

ಇನ್ನು 316 ಜನ ಕ್ಯಾನ್ಸರ್ ರೋಗಿಗಳಲ್ಲಿ 187 ಮಹಿಳೆಯರಿಗೆ ಹಾಗೂ 129 ಪುರುಷರಿಗೆ ರೋಗ ಪತ್ತೆಯಾಗಿದ್ದು ಅವರೆಲ್ಲಾ ದೇಶದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಸಹ ನಮೂದಿಸಲಾಗಿದೆ. 2014 ರಿಂದ ಇಲ್ಲಿಯ ವರೆಗೂ ಸರ್ವೆ ಕಾರ್ಯ ಮಾಡಿದ್ದು ಆ ವರದಿಯನ್ನ ಮಾತ್ರ ಇನ್ನು ನೀಡಿಲ್ಲ. ಇದಲ್ಲದೇ ಕೈಗಾ ಸುತ್ತಮುತ್ತಲಿನ ಇತರೇ ತಾಲೂಕುಗಳಾದ ಜೋಯಿಡಾ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನಲ್ಲಿ ಎಷ್ಟ ಜನರಿಗೆ ಕ್ಯಾನ್ಸರ್ ರೋಗ ಪತ್ತೆಯಾಗಿರುವ ಬಗ್ಗೆ ಮಾಹಿತಿಯನ್ನ ನೀಡಿಲ್ಲ. ಇನ್ನು ಒಟ್ಟು 316 ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿಯನ್ನ ನೀಡಲಾಗಿದೆ. ಈ ಬಗ್ಗೆ ವರದಿಯನ್ನ ಸಹ ಕೈಗಾಕ್ಕೆ ನೀಡಲಾಗಿದೆ
ಎನ್ನಲಾಗಿದೆ.

ಒಟ್ಟಿನಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾದವರ ಸಂಖ್ಯೆ ಕೈಗಾ ಸುತ್ತಮುತ್ತ ಹೆಚ್ಚಾಗಿದೆ ಎನ್ನುವ ಟಾಟಾ ಮೆಮೋರಿಯಲ್ ಸಂಸ್ಥೆಯವರ ವರದಿ ಇದೀಗ ಕಾರವಾರ ತಾಲೂಕಿನ ಜನರಲ್ಲಿ ಆತಂಕವನ್ನ ಸೃಷ್ಟಿಮಾಡಿರುವುದಂತೂ ಸತ್ಯ. ಈ ಬಗ್ಗೆ ಕೈಗಾ ಅಧಿಕಾರಿಗಳು ಯಾವ ಕಾರಣಕ್ಕೆ ಕ್ಯಾನ್ಸರ್ ಬಂದಿದೆ ಎನ್ನುವುದನ್ನ ಸ್ಪಷ್ಟಪಡಿಸಿ ಜನರು ಆತಂಕದಿಂದ ದೂರ ಮಾಡುವ ಅಗತ್ಯವಿದೆ…