ಗೌರವ ಕೊಡದ್ದಕ್ಕೆ ವೃದ್ಧನನ್ನು ಥಳಿಸಿದ ಕಾಂಗ್ರೆಸ್ ಮುಖಂಡ!!

ಎಲೆಕ್ಷನ್​ ಹತ್ತಿರವಾಗುತ್ತಿದ್ದಂತೆ ಅದ್ಯಾಕೋ ಕಾಂಗ್ರೆಸ್​ ಮುಖಂಡರ ಅಟಾಟೋಪ ಎಲ್ಲೆ ಮೀರುತ್ತಿದ್ದು, ನಳಪ್ಪಾಡ್, ಪೆಟ್ರೋಲ್ ನಾರಾಯಣಸ್ವಾಮಿ ಸಾಲಿಗೆ ಇದೀಗ ಕಲಬುರಗಿಯ ಹಸನಾಪುರದಲ್ಲಿ ಇನ್ನೊಬ್ಬ ಮುಖಂಡ ಈ ಸಾಲಿಗೆ ಸೇರ್ಪಡೆಯಾಗಿದ್ದಾನೆ.

adಹೌದು ತನ್ನ ಕಾರು ಬಂದಾಗ ಎದ್ದು ನಿಂತು ಮರ್ಯಾದೆ ಕೊಡ್ಲಿಲ್ಲ ಅಂತ ವೃದ್ಧನ ಮೇಲೆ ಕಾಂಗ್ರೆಸ್ ಮುಖಂಡ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯ ಹಸನಾಪುರದಲ್ಲಿ ನಡೆದಿದೆ. ತಾಲೂಕು ಪಂಚಾಯತ್ ಮಾಜಿ ಸದಸ್ಯ ಸೀತಾರಾಂ ಸುಬೇದಾರ್ ಗ್ರಾಮದಲ್ಲಿ ಹೋಗುವಾಗ ಲಕ್ಕಪ್ಪ ಎಂಬ ವ್ಯಕ್ತಿ ಎದ್ದು ನಮಸ್ಕಾರ ಮಾಡಿಲ್ಲ.

ಇದರಿಂದ ರೊಚ್ಚಿಗೆದ್ದ ಸಿಟ್ಟೆದ್ದ ಸೀತಾರಾಂ ಹಾಗೂ ಅವ್ರ ಅಳಿಯ ಇಂದ್ರಜಿತ್ ವೃದ್ಧನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ನಾನ್ಯಾರಂತ ನಿನಗೆ ಗೊತ್ತಿಲ್ವಾ ಮಗನೇ ಅಂತ ಅವಾಜ್ ಹಾಕಿದ್ದಾನೆ. ಸದ್ಯ ಹಲ್ಲೆಗೆ ಒಳಗಾದ ವೃದ್ಧ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.