Kalladka Prabhakar Bhat reacts on School Adopted By Kollur Mookambika Temple Trust | ಕಲ್ಲಡ್ಕ ಪ್ರಭಾಕರ್​ ಭಟ್​ ಮೇಲೆ ಸಿಎಂ ಸಿದ್ದರಾಮಯ್ಯ ಸೇಡಿನ ಕ್ರಮ ಕೈಗೊಂಡಿದ್ದಾರೆ.

0
10

ಕಲ್ಲಡ್ಕ ಪ್ರಭಾಕರ್​ ಭಟ್​ ಮೇಲೆ ಸಿಎಂ ಸಿದ್ದರಾಮಯ್ಯ ಸೇಡಿನ ಕ್ರಮ ಕೈಗೊಂಡಿದ್ದಾರೆ. ಎರಡು ಶಾಲೆಗಳ ದತ್ತು ಆದೇಶ ರದ್ದುಗೊಳಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಸರ್ಕಾರ ಬಡಮಕ್ಕಳ ಅನ್ನಕ್ಕೆ ಕಲ್ಲು ಹಾಕಿದ್ದಾರೆ. ಕನ್ನಡ ಶಾಲೆಯ 3ಸಾವಿರಕ್ಕೂ ಹೆಚ್ಚು ಮಕ್ಕಳ ಮೇಲೆ ಸಿದ್ದು ಸರ್ಕಾರ ಗದಾಪ್ರಹಾರ ಮಾಡಿದೆ. ಕಲ್ಲಡ್ಕ ಮೇಲಿನ ಸೇಡಿಗೆ ಶಾಲೆ ದತ್ತು ರದ್ದುಗೊಳಿಸಿ ಸಿದ್ದು ಸರ್ಕಾರ ಅನ್ಯಾಯ ಎಸಗಿದೆ. ಕೊಲ್ಲೂರು ಮೂಕಾಂಬಿಕೆ ದೇವಾಲಯದ ಕಾಣಿಕೆ ಹಣದಿಂದ ಶಾಲೆಗಳಿಗೆ ದತ್ತು ನೀಡಲಾಗುತ್ತಿತ್ತು. ದೇಗುಲ ಅನುದಾನದಿಂದ ಮಕ್ಕಳಿಗೆ ಅನ್ನ, ಪುಸ್ತಕ, ಬಟ್ಟೆ ವಿತರಿಸಲಾಗುತ್ತಿತ್ತು. ಆದ್ರೆ, ದತ್ತು ರದ್ಧತಿ ಮಾಡಿ ಬಡಮಕ್ಕಳ ಮೂಲ ಅಗತ್ಯಗಳಿಗೆ ಸರ್ಕಾರ ಕಲ್ಲು ಹಾಕಿದೆ. ಹೀಗಾಗಿ, ಸರ್ಕಾರ ದತ್ತು ಆದೇಶ ರದ್ದು ಮಾಡುವವರೆಗೂ ಬಿಟಿವಿ ಅಭಿಯಾನ ಮುಂದುವರಿಯಲಿದೆ.

walk thrgouh
ದತ್ತು ರದ್ದುಗೊಂಡಿರುವ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಯಲ್ಲಿ ಮಕ್ಕಳಿಗೆ ಅನ್ನದ ವ್ಯವಸ್ಥೆ ಹೇಗಿದೆ? ಮೂಕಾಂಬಿಕಾ ದೇಗುಲದಿಂದ ಅನುದಾನ ಪಡೆವ ಶಾಲೆಯಲ್ಲಿ ಮಕ್ಕಳಿಗೋಸ್ಕರ ಕೈಗೊಂಡಿರೋ ಕ್ರಮಗಳೇನು? ಈ ಬಗ್ಗೆ ನಮ್ಮ ಮಂಗಳೂರು ಪ್ರತಿನಿಧಿ ಭರತ್​ ರಾಜ್​​​ ನಡೆಸಿರೋ ವಾಕ್​ಥ್ರೂ ಇಲ್ಲಿದೆ ನೋಡಿ..

chit chat

ಇನ್ನು ಸಿದ್ಸದರಾಮಯ್ಯ ಸರ್ಕಾರದ ಸೇಡಿನ ಕ್ರಮಕ್ಕೆ ಗುದ್ದು ನೀಡಿದ್ದಾರೆ ಕಲ್ಲಡ್ಕ ಪ್ರಭಾಕರ ಭಟ್​. ಬಿಟಿವಿ ಜೊತೆ ಮಾತನಾಡಿದ ಅವರು ಸರ್ಕಾರದ ಕ್ರಮ ಖಂಡಿಸಿದ್ರು. ಅಲ್ಲದೇ ಭಿಕ್ಷೆ ಬೇಡಿ ಮಕ್ಕಳನ್ನು ಸಾಕ್ತೀವಿ ಅಂತಾ ಮಾರ್ಮಿಕವಾಗೇ ಹೇಳಿದ್ರು

LEAVE A REPLY

Please enter your comment!
Please enter your name here