ಸಚಿವ ರೈ ಎದುರು ಖಾಲಿ ತಟ್ಟೆ‌ ಬಡಿದು ವಿದ್ಯಾರ್ಥಿಗಳ ಆಕ್ರೋಶ- ಕಲ್ಕಡದಲ್ಲಿ‌ ನಡೆಯಿತು ವಿಭಿನ್ನ ಪ್ರತಿಭಟನೆ

ಮಳೆ ನಿಂತರೂ ಹನಿ ನಿಂತಿಲ್ಲ ಎನ್ನುವ ಹಾಗೇ ಕಲ್ಕಡದ ಶ್ರೀರಾಮಮಂದಿರಕ್ಕೆ ಸರ್ಕಾರ ಅನುದಾನ ನಿಲ್ಲಿಸಿದ ವಿಚಾರ ಈಗ ಹಳೆಯದಾದ್ರೂ ಆಕ್ರೋಶ ಇನ್ನು ಕಡಿಮೆಯಾಗಿಲ್ಲ. ಹೌದು ನಿನ್ನೆ ಶ್ರೀರಾಮ ಶಾಲೆಯ ಕ್ರೀಡಾಕೂಟದ ವೇಳೆಯಲ್ಲೂ ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಚಿವ ರಮಾನಾಥ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವ ರಮಾನಾಥ ರೈ ವೇಷ ಧರಿಸಿದ್ದ ವಿದ್ಯಾರ್ಥಿ ಎದುರು ಖಾಲಿ ತಟ್ಟೆ ಬಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ad


ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆಧ್ಯಕ್ಷತೆಯ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕೊಲ್ಲೂರು ದೇವಸ್ಥಾನದಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ಅನುದಾನ ಬರುತಿತ್ತು. ಆದರೇ ಸರ್ಕಾರ ಮಧ್ಯಪ್ರವೇಶ ಮಾಡಿ ಅನುದಾನಕ್ಕೆ ಕತ್ತರಿ ಹಾಕಿತ್ತು. ಈ ಘಟನೆ ನಡೆದು ಹಲವು ತಿಂಗಳು ಕಳೆದರೂ ಇನ್ನು ಕೂಡ ವಿದ್ಯಾರ್ಥಿಗಳ ಆಕ್ರೋಶ ತಣ್ಣಗಾಗಿಲ್ಲ.

 

ಹೀಗಾಗಿ ಕ್ರೀಡಾಕೂಟದಲ್ಲೂ ಅಣಕು ಪ್ರದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳು ರೈಗೆ ಸಖತ್ತಾಗೇ ಟಾಂಗ್ ನೀಡಿದ್ದಾರೆ. ಇನ್ನು ವಿದ್ಯಾರ್ಥಿಗಳ ಈ ಈ ಅಣಕು ಪ್ರದರ್ಶನವನ್ನು ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸಮರ್ಥಿಸಿಕೊಂಡಿದ್ದು ವಿದ್ಯಾರ್ಥಿಗಳು ಟಾಂಗ್ ಕೊಟ್ಟಿಲ್ಲ. ಬದಲಾಗಿ ಇರೋದನ್ನೇ ಹೇಳಿದ್ದಾರೆ ಎಂದಿದ್ದಾರೆ.

ಇನ್ನು ಪ್ರತೀ ವರ್ಷದಂತೆ ಈ ಬಾರಿಯೂ ಶಾಲೆಯಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಅದ್ದೂರಿಯಾಗಿ ನಡೆದಿದ್ದು, ಸಂಸ್ಥೆಯ ಶಿಶು ಮಂದಿರ, ಪ್ರಾಥಮಿಕ ಶಾಲೆ, ಪದವಿ ಪೂರ್ವ, ಪದವಿ ತರಗತಿಗಳ 3300 ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಾರೀರಿಕ ಹಾಗೂ ಸಾಂಸ್ಕೃತಿಕ ವೈವಿದ್ಯಮಯ ಸಾಹಸಗಳನ್ನು ಪ್ರದರ್ಶಿಸಿ ಸೇರಿದ್ದ ಜನ್ರ ಮನಸೂರೆಗೊಂಡ್ರು.

ಒಟ್ಟಿನಲ್ಲಿ ರಾಜಕೀಯ ಕಾರಣಕ್ಕಾಗಿ ಬಡಮಕ್ಕಳ ಹೊತ್ತಿನ ಊಟ ಕಸಿದುಕೊಂಡ ಸರ್ಕಾರದ ಕ್ರಮಕ್ಕೆ ಮಕ್ಕಳೇ ಸಿಡಿದುನಿಂತಿದ್ದು ಸರ್ಕಾರ ಇನ್ನಾದರೂ ವಿದ್ಯಾರ್ಥಿಗಳ ಊಟದಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕಿದೆ.