ನಾಥೂರಾಮ್​ ಗೋಡ್ಸೆ ಮೊದಲ ಹಿಂದು ಉಗ್ರ! ಬಹುಭಾಷಾ ನಟ ಕಮಲಹಾಸನ್​ ಹೊಸ ವಿವಾದ!!

ಬಹುಭಾಷಾ ನಟ ಹಾಗೂ ಮಕ್ಕಳ್​​ ನೀದಿ ಮಯ್ಯಂ​ ಪಕ್ಷದ ಸಂಸ್ಥಾಪಕ  ಕಮಲ್​ ಹಾಸನ್​ ನಾಥೂರಾಮ್ ಗೋಡ್ಸೆ ಭಾರತದ ಮೊದಲ ಹಿಂದೂ ಉಗ್ರ ಎನ್ನುವ ಮೂಲಕ ವಿವಾದವೊಂದನ್ನು ಸೃಷ್ಟಿಸಿದ್ದಾರೆ.  ಕಮಲಹಾಸನ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ರಾಜಕೀಯ ನಾಯಕರ ಟೀಕೆಗೆ ಗುರಿಯಾಗಿದೆ.

ad

ತಮಿಳುನಾಡಿನ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ  ಕಮಲಹಾಸನ್ ಈ ಹೇಳಿಕೆ ನೀಡಿದ್ದು, ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ​ ನಾಥೋರಾಮ್​ ಗೂಡ್ಸೆ ಭಾರತದ ಮೊದಲ ಹಿಂದೂ ಉಗ್ರ ಎಂದಿದ್ದಾರೆ.

ತಾನು ರಾಜಕೀಯಕ್ಕೆ ಬಂದಿರುವ ಉದ್ದೇಶವನ್ನು ತಿಳಿಸುತ್ತಾ ಗಾಂಧಿ ಹತ್ಯೆಗೆ ಉತ್ತರ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಭಾರತೀಯರು ಸಮಾನತೆ ಬಯಸುತ್ತಿದ್ದಾರೆ. ನಾನು ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದರು.ಸದ್ಯ ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ತಮಿಳಿಸಾಯಿ ಸೌಂದರರಾಹನ್​ ಕಿಡಿಕಾರಿದ್ದಾರೆ.

ಕಮಲ್​ ಹಾಸನ್​ ಗಾಂಧಿ ಹತ್ಯೆಯನ್ನು ಈಗ ಪುನಃ ನೆನಪಿಸಿಕೊಂಡಿರುವುದರ ಜೊತೆಗೆ ಹಿಂದು ಭಯೋತ್ಪಾದನೆ ಎಂದು ಹೇಳಿರುವುದು ಖಂಡನಾರ್ಹ, ಮತಗಳನ್ನು ಪಡೆಯುವ ಸಲುವಾಗಿ ಅವರು ಅಪಾಯಕಾರಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಕಮಲ್​ ಶ್ರೀಲಂಕಾ ಸರಣಿ ಬಾಂಬ್ ದಾಳಿ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಕಮಲ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.