ಪರಪ್ಪನ ಅಗ್ರಹಾರಕ್ಕೆ ಕಂಪ್ಲಿ ಗಣೇಶ್..!!

 

 ಹೊಸಪೇಟೆ ಶಾಸಕ ಆನಂದ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನೆಡಿಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಗೆ  ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ಹೇರಿದೆ. ರಾಮನಗರದ ಸಿ ಜೆ ಎಮ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಅನಿತಾ,  ಶಾಸಕ ಗಣೇಶ್ ರವರ ಪ್ರಕರಣದಲ್ಲಿ ತೀರ್ಪು ನೀಡಿದ್ದಾರೆ. ನ್ಯಾಯಾಂಗ ಬಂಧನದ ಮೇರೆಗೆ ಕಂಪ್ಲಿ ಗಣೇಶ್ ರನ್ನು ಪರಪ್ಪನ ಅಗ್ರಹಾರದ ಜೈಲಿಗೆ ಪೊಲೀಸರು ರವಾನಿಸಿದ್ದಾರೆ.

 

ಬಿಡದಿ ಪೋಲೀಸರು ಕಂಪ್ಲಿ ಶಾಸಕ ಗಣೇಶ್ ರನ್ನು ಗುಜರಾತಿನ ಅಹ್ಮದಾಬಾದ್ ನಲ್ಲಿ ಬಂದಿಸಿದ್ದರು. ಗಣೇಶ್ ರನ್ನ ಎಸ್ ಜಿ – 921 ಸ್ಪೈಸ್ ಜೆಟ್ ನಲ್ಲಿ  ದೇವನಹಳ್ಳಿಯ ಕೆಂಪೇಗೌಡ ವಿಮಾನ  ನಿಲ್ದಾಣದಿಂದ ಗಣೇಶ್ ರನ್ನ ಪೊಲೀಸರು ನೇರ ಬಿಡದಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ಬಿದರು. ಬಿಡದಿ ಠಾಣೆಯಲ್ಲಿ ಕಾನೂನು ಪ್ರಕ್ರಿಯೆಗಳನ್ನ ಪೊಲೀಸರು ಮಾಡಿ ಮುಗಿದ ನಂತರ ಕೋರ್ಟಿ ಗೆ ಕಂಪ್ಲಿ ಶಾಸಕ ಗಣೇಶ್ ರನ್ನ ಹಾಜರ್ ಮಾಡಿದ್ದರು.