ನೆಲಮಂಗಲದಲ್ಲಿ ಶಾಸಕರ ಭರ್ಜರಿ ಡ್ಯಾನ್ಸ- ಟ್ರಾಫಿಕ್ ಜಾಮ್ ನಲ್ಲಿ ಅಂಬುಲೆನ್ಸ್ ಪರದಾಟ!!!

ನೆಲಮಂಗಲದಲ್ಲಿ ಕನಕ ಜಯಂತಿಯನ್ನು ಭರ್ಜರಿಯಾಗಿ ಆಚರಿಸಲಾಯಿತು. ಸ್ತಬ್ಧಚಿತ್ರಗಳು ಹಾಗೂ ಡೋಲು-ತಮಟೆ ಕನಕ ಜಯಂತಿಯ ಅಂದ ಹೆಚ್ಚಿಸಿದ್ದರು. ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಮೂರ್ತಿ ಪಾಲ್ಗೊಂಡಿದ್ದರು.

ad

ಈ ವೇಳೆ ತಮಟೆ ಸದ್ದಿಗೆ ಶಾಸಕ ಶ್ರೀನಿವಾಸ ಮೂರ್ತಿ ಸಖತ್ ಆಗಿ ಸ್ಟೆಪ್​ ಹಾಕಿ ಕುಣಿದಿದ್ದಾರೆ. ಇತ್ತ ಶಾಸಕರು ಸ್ಟೆಪ್ ಹಾಕುತ್ತಿದ್ದ ಎಮ್​.ಎಲ್​​.ಎ ಬೆಂಬಲಿಗರು ಸಖತ್ತಾಗಿಯೇ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಆದರೇ ಈ ಡ್ಯಾನ್ಸ್​ ಗಳ ಭರಾಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಹೀಗಾಗಿ ಅಂಬುಲೆನ್ಸ್​ವೊಂದು ಟ್ರಾಫಿಕ್​​ನಲ್ಲಿ ಸಿಲುಕಿಕೊಂಡು ಪರದಾಡಿತು. ಸ್ವಲ್ಪ ಸಮಯದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಟ್ರಾಫಿಕ್ ಕ್ಲಿಯರ್​ ಮಾಡಿ ಅಂಬುಲೆನ್ಸ್​​ಗೆ ಅವಕಾಶ ಕಲ್ಪಿಸಿಕೊಟ್ಟರು.