ಕಂಚಿ ಕಾಮಕೋಟಿ ಶ್ರೀ ಗಳು ದೈವಾಧೀನ

ಕಂಚಿ ಕಾಮಕೋಟಿಯ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಇನ್ನಿಲ್ಲ. ಶಂಕರಾಚಾರ್ಯ ಜಯೇಂದ್ರ ಸ್ವಾಮೀಜಿ ಇಂದು ಮುಂಜಾನೆ ಚೆನ್ನೈನ ಶಂಕರ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 82 ವರ್ಷದ ಶ್ರೀಗಳಿಗೆ ಹೃದಯಾಘಾತ ಉಂಟಾಗಿದೆ. ಕಳೆದ ಹಲವುದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಶ್ರೀಗಳು ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜನವರಿಯಲ್ಲಿ ಕುಸಿದು ಬಿದ್ದು ರಾಮಚಂದ್ರ ಆಸ್ಪತ್ರೆಗೆ ಸೇರಿದ್ದ ಕಂಚಿಶ್ರೀಗಳು ಆನಂತ್ರ ಡಿಸ್ಚಾರ್ಜ್​​ ಆಗಿದ್ರು.

ad


ಆದ್ರೆ ಕೆಲ ದಿನಗಳ ಹಿಂದೆ ಮತ್ತೆ ಅಸ್ವಸ್ಥಗೊಂಡು ಶಂಕರ ಆಸ್ಪತ್ರೆ ಸೇರಿದ್ದರು. ಕಂಚಿ ಕಾಮಕೋಟಿ ಪೀಠದ 69ನೇ ಪೀಠಾಧಿಪತಿಯಾಗಿದ್ದ ಜಯೇಂದ್ರ ಸರಸ್ವತಿ ಶ್ರೀಗಳು 1954 ಮಾರ್ಚ್​ 22ರಂದು ಕಂಚಿ ಪೀಠಾಧಿಪತಿಯಾಗಿ ನೇಮಕವಾಗಿದ್ದರು. ಕಂಚಿ ಶ್ರೀಗಳು ಕಾಂಚಿಪುರ ವರದರಾಜ ಪೆರುಮಾಳ್​​ ದೇಗುಲದ ಮ್ಯಾನೇಜರ್​ ಶಂಕರರಾಮನ್​​ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಆನಂತ್ರ ದೋಷಮುಕ್ತಗೊಂಡಿದ್ದರು.