ರಂಗಾಯಣ ರಘು ರಾಜಕೀಯಕ್ಕೆ.. ಯಾವ ಪಕ್ಷ?

ರಾಜಕೀಯಕ್ಕೂ, ಚಿತ್ರರಂಗಕ್ಕೂ ಹಿಂದಿನಿಂದಲೂ ನಂಟಿದೆ.‌ಸ್ಯಾಂಡಲವುಡ್ ನ ಹಲವಾರು ನಟ-ನಟಿಯರು ರಾಜಕೀಯದಲ್ಲಿ ಅದೃಷ್ಟಪರೀಕ್ಷೆ ಮಾಡಿ ಗೆದ್ದು- ಸೋತಿದ್ದಾರೆ. ಇದೀಗ ಈ ಸಾಲಿಗೆ ಕನ್ನಡ ಚಿತ್ರರಂಗದ ಹಾಸ್ಯ‌ನಟ ರಂಗಾಯಣ ರಘು ಈ ಸಾಲಿಗೆ ಸೇರ್ಪಡೆಯಾಗಲಿದ್ದಾರೆ. ಹೌದು ರಂಗಾಯಣ ರಘು ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದು , ತುಮಕೂರಿನ ಮಧುಗಿರಿಯಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ‌ ಕೇಳಿ ಬಂದಿದೆ.

ತುಮಕೂರಿನ‌‌ ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ವಿರುದ್ಧ ರಂಗಾಯಣ ರಘು ಸ್ಪರ್ಧಿಸಲಿದ್ದಾರೆ ಎನ್ನಲಾಗಿದ್ದು ಈಗಾಗಲೇ ಮಾಜಿ ಪ್ರಧಾನಿ ದೇವೆಗೌಡರ್ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಸಧ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.ಈ ಬಗ್ಗೆ  ಬಿಟಿವಿ ನ್ಯೂಸ್ ಜೊತೆ ಮಾತನಾಡಿದ ನಟ ರಂಗಾಯಣ ರಘು, ರಾಜಕೀಯಕ್ಕೆ ಬರುವ ವಿಚಾರ ಇದೆ. ದೇವೆಗೌಡರೇ ಚುನಾವಣೆ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ವಿಚಾರ ಮಾಡುತ್ತಿದ್ದೇನೆ. ರಾಜಕೀಯ ಎಂದರೇ ಹುಡುಗಾಟವಲ್ಲ. ಧೀಡಿರ ಯಾವುದೇ ನಿರ್ಧಾರ ಮಾಡಲಾಗುವುದಿಲ್ಲ. ಯೋಚಿಸಿ ನಿರ್ಧಾರ ಮಾಡುತ್ತೇನೆ. ಹಿರಿಯರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಒಟ್ಟಿನಲ್ಲಿ ಬಹುತೇಕ ರಂಗಾಯಣ ರಘು ರಾಜಕೀಯಾಗಮನ ಖಚಿತವಾದಂತಾಗಿದ್ದು, ಚುನಾವಣೆ ವೇಳೆ ಇನ್ನು ಎಷ್ಟು ನಟ-ನಟಿಯರು ‌ರಾಜಕಿಯ ರಂಗಕ್ಕೆ‌ ಬರುತ್ಯಾರೋ ಕಾದು ನೋಡಬೇಕಿದೆ.

Watch Here: https://youtu.be/IsDr8E5xUbU