ಡಿಫರೆಂಟ್​ ಪ್ರಮೋಶನ್​ ಮೂಲಕ ಗಮನ ಸೆಳೆಯುತ್ತಿದೆ ಕವಲುದಾರಿ

ಒಂದು ಸಿನಿಮಾ ಸಿದ್ಧಗೊಳಿಸುವುದು ಒಂದು ಯಜ್ಞವಾದರೆ ಅದನ್ನು ಜನರಿಗೆ ತಲುಪಿಸುವುದು ಕೂಡ ಮತ್ತೊಂದು ಸಾಹಸ. ಕೆಲವೊಮ್ಮೆ ಚಿತ್ರತಂಡ ಪ್ರಮೋಶನ ಮಾಡುವುದರಲ್ಲಿ ಎಡವಿ  ಯಶಸ್ಸು ಕಳೆದುಕೊಂಡಿದ್ದು ಉಂಟು. ಚಿತ್ರದ ಬಗ್ಗೆ ಕ್ಯೂರಿಯಾಸಿಟಿಯನ್ನ ಮೂಡಿಸಿ ಜನರನ್ನ ಥಿಯೇಟರ್ ಕಡೆ ಧಾವಿಸುವಮತೆ ಮಾಡುವ ಪ್ರಮೋಷನ್ ಕೂಡ ಒಂದು ಕಲೆ.

ತಮ್ಮ ಸಿನಿಮಾವನ್ನು ಜನರಿಗೆ ತಲುಪಿಸಲು ಚಿತ್ರತಂಡಗಳು ಅನೇಕ ಗಿಮಿಕ್​ಗಳನ್ನ ಹುಡುಕುತ್ತವೆ . ಕೆಲವರು ಸಿನಿಮಾದ ಹಾಟ್ ವಿಡಿಯೋಗಳನ್ನ ವೈರಲ್ ಮಾಡುವುದರ ಮೂಲಕ ಪ್ರೇಕ್ಷಕನ ಅಟೇನ್ಷನ್​ನನ್ನು ತನ್ನತ ಸೆಳೆದು ಕೊಳ್ಳುತ್ತವೆ. ಆದರೆ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ನಿರ್ಮಿಸುತ್ತಿರುವ ಕವಲು ದಾರಿ ಟೀಮ್ ರವರು ಕೊಂಚ ಡಿಫರೆಂಟ್ ಆಗಿ ಪ್ರಮೋಷನ್​ ತಂತ್ರ ಕಂಡುಕೊಂಡಿದ್ದಾರೆ.

 

 

ಈ ಹಿಂದೆ ‘ಗೋಧಿ ಬಣ್ಣ ಸಾಧಾರಣ ಮೈ ಕಟ್ಟು’ ಸಿನಿಮಾಗೆ ಕಾಫಿ ಕಪ್ ನಲ್ಲಿ ಚಿತ್ರದ ಹೆಸರನ್ನು ಬರೆಯುವ ಮೂಲಕ ವಿಭಿನ್ನ ಪ್ರಮೋಷನ್ ಮಾಡಲಾಗಿತ್ತು ಇದೀಗಾ ಕವಲುದಾರಿಯ ತಂಡ ಇದೆ ರೀತಿ ಡಿಫರೆಂಟ್ ಆಗಿ ಮಾಡಲು ಹೊರಟ್ಟಿದ್ದು ಟಿಶ್ಯೂ ಪೇಪರ್ ನಲ್ಲಿ ‘ಕವಲುದಾರಿ’ ಚಿತ್ರದ ವಿವರ, ಚಿತ್ರದ ಬಿಡುಗಡೆಯ ದಿನಾಂಕವನ್ನು ಪ್ರಿಂಟ್ ಮಾಡಲಾಗಿದ್ದು ಈ ಮೂಲಕ ಸಿನಿಮಾ ಒಂದಷ್ಟು ಜನರಿಗೆ ತಲುಪಿಸಿದೆ.

ಪೋಸ್ಟರ್ ಗಳು ಬ್ಯಾನ್ ಆಗಿರುವ ಈ ಕಾಲಕ್ಕೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ಚಿತ್ರವನ್ನು ಜನರಿಗೆ ರೀಚ್ ಮಾಡಿಸಲಾಗುತ್ತಿದೆ. ‘ಕವಲುದಾರಿ’ ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾವಾಗಿದ್ದು, ಚಿತ್ರ ಏಪ್ರಿಲ್ 12 ರಂದು ಬಿಡುಗಡೆಯಾಗುತ್ತಿದೆ.
ಅದೇ ರೀತಿ ಈಗ ‘ಕವಲುದಾರಿ’ ಟೀಂ ಹೊಸ ಪ್ಲಾನ್ ಮಾಡಿದೆ. ತಮ್ಮ ವಿಭಿನ್ನ ಪ್ರಮೋಷನ್ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ನಿರ್ಮಿಸುತ್ತಿರುವ ಕವಲು ದಾರಿ ಹೇಮಂತ್ ಎಂ.ರಾವ್ ಅವರ ಎರಡನೇ ನಿರ್ದೇಶನದ ಚಿತ್ರವಾಗಿದ್ದು. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟ ರಿಷಿ, ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಅನಂತ್ ನಾಗ್ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಸಿನಿಮಾಗೆ ಇದೆ.