ಕರಿಯಾ ಚಿತ್ರಕ್ಕೆ 15 ರ ಹರೆಯ- ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗ್ತಿದೆ ಮೂವಿ

ಇವತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಂದ್ರೆ ಸ್ಯಾಂಡಲ್​​ವುಡ್​​ನ ಬಾಕ್ಸಾಫೀಸ್​ ಸುಲ್ತಾನ್​​. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿರುವ ದರ್ಶನ್​ಗೆ ಮೊದಲು ಬ್ರೇಕ್​ ಕೊಟ್ಟ ಸಿನಿಮಾ ಕರಿಯಾ.

 ದರ್ಶನ್​ ಸ್ಯಾಂಡಲವುಡ್​​ ಸುಲ್ತಾನ್​ನನಾಗಿ ಬೆಳೆದಿರುವ ದರ್ಶನ್​ಗೆ ಆರಂಭದ ಚಿತ್ರ ಕರಿಯಾ ಸಾಕಷ್ಟು ಹೆಸರು ತಂದುಕೊಟ್ಟಿದೆ.
ಸ್ಯಾಂಡಲ್​​ವುಡ್​ನಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ಈ ಸಿನಿಮಾ ತೆರೆಕಂಡು ಇದೀಗ ಭರ್ತಿ 15 ವರ್ಷ. 2003ರ ಜವರಿ 3ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಚಿತ್ರ ತೆರೆಕಂಡು 15 ವವರ್ಷ ಆಗಿರೋದರಿಂದ ಟ್ವಿಟ್ಟರ್​​​​ನಲ್ಲಿ ಟ್ರೆಂಡ್​​ ಆಗ್ತಿದೆ. ಡಿ ಫ್ಯಾನ್ಸ್​​ ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರೇಟ್​​ ಮಾಡ್ತಿದ್ದಾರೆ.

 

 

ಅಂದಹಾಗೆ ಕರಿಯಾ ಚಿತ್ರಕ್ಕೆ ಪ್ರೇಮ್​​ ಆ್ಯಕ್ಷನ್​ ಕಟ್​​​ ಹೇಳಿದ್ದರು. ರೌಡಿಯೊಬ್ಬನ ಪ್ರೇಮಕತೆ ಆಧರಿಸಿದ ಈ ಚಿತ್ರ ಅಂದಿನ ಯುವಜನತೆಯ ಹಾಟ್ ಫೆವರಿಟ್​ ಚಿತ್ರವಾಗಿತ್ತು. ಚಿತ್ರದ ಕೆಂಚಾಲೋ ಮಂಚಾಲೋ ಹಾಡಂತು ಯುವಜನತೆಯ ಬಾಯಲ್ಲಿ ಬಹುವರ್ಷಗಳ ಕಾಲ ನಲಿದಾಡಿತ್ತು. ಈ ಚಿತ್ರದ ಬಳಿಕ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಸ್ಯಾಂಡಲ್​ವುಡ್​​ನಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ರು. ಇದೀಗ ದರ್ಶನ್​ಬಹುನೀರಿಕ್ಷಿತ ಕುರುಕ್ಷೇತ್ರ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಹೊಸ ದಾಖಲೆಗೆ ಸಿದ್ದವಾಗುತ್ತಿದ್ದಾರೆ.