ಪಿಯು ಬೋರ್ಡ್ ಯಡವಟ್ಟಿನಿಂದ ಹುಬ್ಬಳ್ಳಿಯ ಲಕ್ಷ್ಮಿ ಕಾಲೋನಿಯ ನಿವಾಸಿಯಾದ ಯತೀನ್ ರೋಕಡೆ ಎಂಬ ವಿದ್ಯಾರ್ಥಿ ಭವಿಷ್ಯವೇ ಹಾಳಾಗಿದೆ. ಯತೀನ್​ಗೆ ಪಿಯುಸಿಯ ಕೆಮಿಸ್ಟ್ರಿ ಪತ್ರಿಕೆಯಲ್ಲಿ ಕಡಿಮೆ ಅಂಕ ಬಂದಿದ್ದವು. ಅನುಮಾನಗೊಂಡ ಪೋಷಕರು ಪಿಯು ಬೋರ್ಡ್​ನಿಂದ ಉತ್ತರ ಪತ್ರಿಕೆಯನ್ನು ತೆರೆಸಿಕೊಂಡ್ರು. ಪಿಯು ಬೋರ್ಡ್​ನಿಂದ ಬಂದ ಉತ್ತರ ಪತ್ರಿಕೆ ಯತೀನ್​​ದ್ದಾಗಿರಲಿಲ್ಲ .ಪಿಯು ಬೋರ್ಡ್ ಮಾಡಿರುವ ಅವಾಂತರದಿಂದ ವಿದ್ಯಾರ್ಥಿ ಹಾಗೂ ಪೋಷಕರು ಕಂಗಾಲಾಗಿದ್ದಾರೆ.ಯತೀನ್​​ ಹುಬ್ಬಳ್ಳಿಯ K.H ಪಟೇಲ್​​ ಕಾಳೀಜಿನಲ್ಲಿ ಪಿಯುಸಿಯಲ್ಲಿ ವ್ಯಾಸಂಗ ಮಾಡಿದ್ದ ಎಲ್ಲಾ ವಿಷಯದಲ್ಲೂ ಉತ್ತಮ ಫಲಿತಾಂಶ ಬಂದು ಕೇವಲ ರಸಯನಶಾಸ್ತ್ರದಲ್ಲಿ ಮಾತ್ರ ಹೀಗೆ ಫೇಲ್​ ಆಗಿರುವುದರಿಂದ ಪೋಷಕರು ಹಅಗೂ ವಿದ್ಯಾರ್ಥಿ ಚಿಂತೆಯಲ್ಲಿ ಮುಳುಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here