ಲಾಡ್ಜ್​ಗೆ ಬಾ ಎಂದವನಿಗೆ ಬಿತ್ತು ಸಖತ್ ಗೂಸಾ.!!

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಮಹಿಳಾ ಪೀಡಕನಿಗೆ ಸಂಬಂಧಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪ್ರಕಾಶ್ ಅಜ್ಜನನವರ್ ಗೂಸಾ ತಿಂದ ಪೀಡಕ. ಮುಂಡಗೋಡ ತಾಲೂಕಿನ ಖಾತೂರು ಗ್ರಾಮದ ನಿವಾಸಿಯಾದ ಈತ ಜಾತಿ ಸರ್ಟಿಫಿಕೇಟ್ ಮಾಡಿಕೊಡುವುದಾಗಿ ಮಹಿಳೆಗೆ ಪರಿಚಯವಾಗಿದ್ದ. ಬಳಿಕ ಮಹಿಳೆಯ ಮೊಬೈಲ್ ನಂಬರ್ ಪಡೆದು ನಿತ್ಯ ಕಿರುಕುಳ ನೀಡ್ತಿದ್ದ. ಅಲ್ದೆ, ಹುಬ್ಬಳ್ಳಿಯ ಲಾಡ್ಜ್​​ಗೆ ಮಹಿಳೆಯನ್ನ ಕರೆದಿದ್ದ. ಹೀಗಾಗಿ, ಮಹಿಳೆ ವಿಷಯವನ್ನ ಸಂಬಂಧಿಕರಿಗೆ ತಿಳಿಸಿದ್ರು. ಕಾಮುಕ ಪ್ರಕಾಶ್​​ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವಾಗ ಮಹಿಳಾ ಸಂಬಂಧಿಕರು ಹಿಡಿದು ತಕ್ಕ ಪಾಠ ಕಲಿಸಿದ್ದಾರೆ. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.