ಬೈಕ್ ಸಮೇತ ಲಾರಿಗೆ ಅಪ್ಪಳಿಸಿದ್ರೂ ಬದುಕುಳಿದ ಸವಾರರು!! ಇದು ಮೈನವಿರೇಳಿಸುವ ದೃಶ್ಯ!!!

ಆಯುಷ್ಯ ಗಟ್ಟಿ ಇದ್ದರೇ ಎಂಥಹ ಪರಿಸ್ಥಿತಿ ಯಲ್ಲೂ ಸಾವನ್ನು ಗೆಲ್ಲಬಹುದು ಅಂತಾರೆ. ಅದಕ್ಕೆ ತಾಜಾ ಉದಾಹರಣೆ ಎಂದರೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೀರೆಗುತ್ತಿಯ ಬಳಿ ಈ ಘಟನೆ. ಹೌದು ಇಲ್ಲಿ ಬೈಕ್ ಸವಾರರಿಬ್ಬರು ಚಲಿಸುತ್ತಿದ್ದ ಲಾರಿಗೆ ಅಪ್ಪಳಿಸಿದರೂ ಬದುಕುಳಿದಿದ್ದಾರೆ.

ಹೀರೆಗುತ್ತಿಯ ಚೆಕ್‌ಪೋಸ್ಟ್ ಬಳಿ ಲಾರಿಯೊಂದನ್ನು ನಿಲ್ಲಿಸಲಾಗಿತ್ತು. ಅದರ‌ ಹಿಂಬದಿಯಿಂದ ಬಂದ ಬೈಕ್‌ ಸವಾರರು ಧೀಡಿರ ಓವರ್ ಟೇಕ್ ಮಾಡಿ ಮುಂದೇ ಬಂದಿದ್ದಾರೆ. ಈ ವೇಳೆ ಎದುರುಗಡೆಯಿಂದ ಬರುತ್ತಿದ್ದ ಲಾರಿಯೊಂದಕ್ಕೆ‌ ಬೈಕ್ ಸಮೇತ ಡಿಕ್ಕಿ ಹೊಡೆದಿದ್ದಾರೆ. ಬೈಕ್ ರೈಡರ್ ನೇರವಾಗಿ ಲಾರಿಯ ಎದುರು ಚಕ್ರದ ಬಳಿ ಸಿಲುಕಿದ್ದರೇ, ಹಿಂಬದ ಸವಾರ ಲಾರಿಯ ಇನ್ನೊಂದು ಬದಿ ಚಕ್ರದ ಬಳಿ ಬಂದು ಬಿದ್ದಿದ್ದಾನೆ. ಲಾರಿ ಚಾಲಕ ಸಮಯ ಪ್ರಜ್ಞೆ ತೋರಿ ತಕ್ಷಣ ಲಾರಿ‌ ನಿಲ್ಲಿಸಿದ್ದರಿಂದ ಇಬ್ಬರು ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಬಾಲಚಂದ್ರ ಅಂಬಿಗ್ ನ ಕಾಲಿಗೆ ಸ್ವಲ್ಪ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೈ ಜುಮ್ಮೆನಿಸುವ ದೃಶ್ಯ ಎದುರಿನ ಅಂಗಡಿಯಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಪ್ರತ್ಯುತ್ತರ ನೀಡಿ

Please enter your comment!
Please enter your name here