ಮತ್ತೆ ಸುದ್ದಿಯಲ್ಲಿದ್ದಾರೆ ಬಿಗ್​ಬಾಸ್​ ಚೆಲುವೆ ಕವಿತಾ ಗೌಡ! ಚಿನ್ನು ಖ್ಯಾತಿಯ ಕವಿತಾ ಕತೆ ಏನು ಗೊತ್ತಾ?!

ಕಿರುತೆರೆಯಲ್ಲಿ ಸೀರಿಯಲ್​ಗಳ ಮೂಲಕ ಮೋಡಿ ಮಾಡಿ ಚಿನ್ನು ಎಂದೇ ಪ್ರಸಿದ್ಧಿಯಾಗಿದ್ದ ನಟಿ ಕವಿತಾ ಗೌಡ ಈಗ  ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ರಾಜ್ಯದಾದ್ಯಂತ ಮನೆಮಾತಾದ  ಕವಿತಾ ಗೌಡ ಈಗ ಸ್ಯಾಂಡಲವುಡ್​​ ಹಾಗೂ ಬಾಲಿವುಡ್​ ದೂದ್ ಪೇಡ್​ ದಿಗಂತಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಚಿತ್ರದ ಮೂಲಕ ಕವಿತಾ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲು ಹೊರಟಿದ್ದಾರೆ.

ad

 

2017 ರಲ್ಲಿ ತೆರೆಕಂಡ ‘ಶ್ರೀನಿವಾಸ ಕಲ್ಯಾಣ’ ಚಿತ್ರದಲ್ಲಿ ನಾಯಕಿಯಾಗಿ ಬೆಳ್ಳೆ ಪರದೆಗೆ ಎಂಟ್ರಿ ಕೊಟ್ಟಾ ಕವಿತಾ ಗೌಡಾ ಇದೀಗಾ ಸ್ಯಾಂಡಲ್ ವುಡ್ ನ ದೂದ್ ಪೇಡ ದಿಗಂತ್ ಅಭಿನಯದ ಹೊಸ ಸಿನಿಮಾ ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರಕ್ಕೆ ಕವಿತಾ ನಾಯಕಿ ಆಗಿ ಆಯ್ಕೆಯಾಗಿದ್ದು ಮೊದಲ ಬಾರಿಗೆ ಕವಿತಾ ದಿಗಂತ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ.

ಮದುವೆ ನಂತರ ಕೊಂಚ ಬ್ರೇಕ್ ತೆಗೆದು ಕೊಂಡಿದ್ದ ದಿಗಂತ್ ಈಗ ‘ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಇನ್ನು ರಿಯಾಲಿಟಿ ಶೋನಲ್ಲಿ ಭಾಗಿಯಾಗಿ ತನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವ ಕವಿತಾ ಈಗ ಸದ್ಯ ‘ಹುಟ್ಟುಹಬ್ಬದ ಶುಭಾಶಯಗಳು’ ಹೇಳಲು ಬರ್ತಿದ್ದಾರೆ

‘ಹುಟ್ಟುಹಬ್ಬದ ಶುಭಾಶಯಗಳು’ ಕವಿತಾ ಅವರ ಎರಡನೆ ಸಿನಿಮಾ ಆಗಿದೆ. ‘ಹುಟ್ಟುಹಬ್ಬದ ಶುಭಾಶಯಗಳು’ ಕಾಮಿಡಿ ಥ್ರಿಲ್ಲಿಂಗ್ ಸಿನಿಮಾ ಆಗಿದ್ದು ಈ ಚಿತ್ರವನ್ನು ಯುವ ನಿರ್ದೇಶಕ ನಾಗರಾಜ್ ಬೇತೂರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ‘ಚಮಕ್’ ಮತ್ತು ‘ಅಯೋಗ್ಯ’ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ಬಂಡವಾಳ ಹೂಡುತ್ತಿದ್ದಾರೆ.