ಸ್ಯಾಂಡಲ್ ವುಡ್​ನಲ್ಲಿ ಮೋಡಿ ಮಾಡಲು ಸಿದ್ಧವಾಗುತ್ತಿದೆ ‘ಕೆಜಿಎಫ್’-2 ಹಾಡುಗಳು!

ಏಕಕಾಲದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲಾ ಕಡೆಗಳಿಂದ ಒಳ್ಳೆಯ ರೆಸ್ಪಾನ್ಸ್ ಪಡೆದು. ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಠಿಸಿದ ಸಿನಿಮಾ ಕೆಜಿಎಫ್.ಸ್ಯಾಂಡಲ್ ವುಡ್​ನಲ್ಲಿ ಬಾಕ್ಸ್ ಆಫಿಸ್​ ಕೊಳ್ಳೆ ಹೊಡೆದು ದಾಖಲೆ ನಿರ್ಮಿಸಿದ ‘ಕೆಜಿಎಫ್’ ತಂಡ ಇದೀಗ ಕೆಜಿಎಫ್ ಚಾಪ್ಟರ್ 2 ಗೆ ಸಿದ್ಧವಾಗುತ್ತಿದೆ.

ad

‘ಕೆಜಿಎಫ್’ ಚಾಪ್ಟರ್ 1 ಕನ್ನಡ. ಮಲಯಾಳಂ. ತಮಿಳು. ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡಿದ್ದು ಎಲ್ಲರು ಒಮ್ಮೆ ಸ್ಯಾಂಡಲ್​ವುಡ್​​ನ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಅಲ್ಲದೆ ಈ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಅಭಿಮಾನ  ಮೆಚ್ಚುಗೆಯನ್ನ ಗಳಿಸಿತ್ತು.

  

ಇತ್ತೀಚೆಗಷ್ಟೇ ಚಿತ್ರತಂಡ ಕೆಜಿಎಫ್​​-2 ಗೆ ಸರಳವಾಗಿ ಮುಹೂರ್ತ ನಡೆಸಿದ್ದು, ಈಗ ಕೆಜಿಎಫ್​​​ ಭಾಗ 2ರ ಚಿತ್ರೀಕರಣಕ್ಕೆ ರೆಡಿಯಾಗಿದೆ. ರವಿ ಬಸ್ರೂರು ಸಾರಥ್ಯದಲ್ಲಿ ಮೂಡಿಬಂದ ಮೊದಲ ಚಿತ್ರದ ಹಾಡುಗಳು  ಸೂಪರ್ ಹಿಟ್ ಆಗಿದ್ದು. ಈಗ ಎರಡನೇ ಚಾಪ್ಚರ್ ನ ಹಾಡಿನ ಕೆಲಸಗಳು ಪ್ರಾರಂಭವಾಗಿದೆ ರವಿ ಬಸ್ರೂರು ಅವರು ಮ್ಯೂಸಿಕ್ ಕಂಪೋಸಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ

 

‘ಕೆಜಿಎಫ್-2’ ಚಿತ್ರದ ಸಂಗೀತ ಕೆಲಸಗಳು ಶುರು ಆಗಿದ್ದು. ಈ ಸಂತಸದ ಸುದ್ದಿಯನ್ನು ‘ಕೆಜಿಎಫ್’ ಟೀಂ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದೆ. ಸ್ಟುಡಿಯೋದಲ್ಲಿ ಕುಳಿತು ಸಂಗೀತ ಸಂಯೋಜನೆಯಲ್ಲಿ ನಿರತರಾಗಿರುವ ರವಿ ಬಸ್ರೂರು ಮತ್ತು ಪ್ರಶಾಂತ್ ನೀಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಲೊಕೇಶನ್ ಹುಡುಕಾಟ ಹಾಗೂ ಸಂಭಾಷಣೆ ಬರೆಯುವುದರಲ್ಲಿ ನಿರತರಾಗಿದ್ದಾರೆ. ನಾಯಕ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ಸೇರಿದಂತೆ, ‘ಕೆಜಿಎಫ್’ ಚಿತ್ರದಲ್ಲಿದ್ದ ನಟ-ನಟಿಯರು, ತಂತ್ರಜ್ಞರು ಮುಂಬರುವ ‘ಕೆಜಿಎಫ್ -2’ ಚಿತ್ರದಲ್ಲೂ ಕೆಲಸ ಮಾಡಲಿದ್ದು, ಅವರೆಲ್ಲರ ಜೊತೆ ಹೊಸದಾಗಿ ಕೆಲವು ಘಟಾನುಘಟಿಗಳು ಸೇರಲಿದ್ದಾರೆ ಎಂಬುದು ತಿಳಿದುಬಂದಿದೆ.
ಬಾಲಿವುಡ್ ನಟಿ ರವೀನಾ ಟಂಡನ್, ಬಾಹುಬಲಿ ‘ಶಿವಗಾಮಿ’ ಖ್ಯಾತಿಯ ರಮ್ಯಕೃಷ್ಣ ಮೊದಲಾದವರ ಹೆಸರುಗಳು ಪ್ರಮುಖವಾಗಿವೆ. ‘ಕೆಜಿಎಫ್’ ಇಡೀ ತಂಡ, ಯಶ್ ಜೊತೆಗೂಡಿ ‘ಕೆಜಿಎಫ್-2’ ಚಿತ್ರಕ್ಕೆ ಸಿದ್ಧತೆಗೆ ತೊಡಗಿರುವುದು ಕನ್ನಡ ಸಿನಿಪ್ರೇಕ್ಷಕರನ್ನು ಅಚ್ಚರಿಯ ಜೊತೆಗೆ ಮೆಚ್ಚುಗೆ ವ್ಯುಕ್ತಪಡಿಸುವಂತೆ ಮಾಡಿವೆ.

ಸ್ಯಾಂಡಲ್ ವುಡ್ ನಲ್ಲಿ ದಾಖಲೆ ನಿರ್ಮಿಸಿದ ‘ಕೆಜಿಎಫ್’ ತಂಡ ಎರಡನೇ ಭಾಗದ ಚಿತ್ರೀಕರಣವನ್ನ ಭರ್ಜರಿಯಾಗಿ ನಡೆಸುತ್ತಿದ್ದಾರೆ. ‘ಕೆಜಿಎಫ್’ ಚಾಪ್ಟರ್ 1 ಗೆ ಫಿದಾ ಆದ ಪ್ರೆಕ್ಷಕರು ಸದ್ಯ ‘ಕೆಜಿಎಫ್’ ಎರಡನೇ ಚಾಪ್ಟರ್ ಗೆ ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಏಪ್ರಿಲ್ ಕೊನೆ ವಾರದಿಂದ ಕೆಜಿಎಫ್ 2 ಚಿತ್ರೀಕರಣ

ಸದ್ಯ ರಾಕಿ ಬಾಯ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಮಂಡ್ಯದಲ್ಲಿ ಮತ ಪ್ರಚಾರದಲ್ಲಿ ಬ್ಯುಸಿಯಾಗಿದ್ದು ಸಧ್ಯದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಈಗ ಚಿತ್ರದ ಬೇರೆ ಬೇರೆ ಪ್ರಮುಖ ಭಾಗಗಳ ಚಿತ್ರೀಕರಣ ನಡೆಯುತ್ತಿದೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ‘ಕೆಜಿಎಫ್’ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.

ಬಾಲಿವುಡ್​ ನಟ ಶಾರುಕ್​ ಖಾನ್​ರವರ ಜಿರೋ ಚಿತ್ರವನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ ಕೆಜಿಎಫ್​ ಚಿತ್ರ ತಂಡ ಇದೀಗಾ ಮತ್ತೆ ದಾಖಲೆ ನಿರ್ಮಿಸಲು ಸಜ್ಜಾಗುತ್ತಿದೆ