KGF ಚಾಪ್ಟರ್-2 ಶೂಟಿಂಗ್ ಶುರು – ಅಖಾಡಕ್ಕೆ ರಾಕಿ ಭಾಯ್ ಯಶ್ ಎಂಟ್ರಿ!!

ಸ್ಯಾಂಡಲ್​ವುಡ್​​ ನ ಹಿಟ್ ಮೂವಿ ಕೆಜಿಎಫ್​​  ವಿಶ್ವದಾದ್ಯಂತ ಪಂಚಭಾಷೆಗಳಲ್ಲಿ ತೆರೆಕಂಡು ಯಶಸ್ಸು ಗಳಿಸಿತ್ತು . ಕೆಜಿಎಫ್ ರಾಕಿ ಭಾಯ್ ಬಾಕ್ಸಾಫೀಸ್ನಲ್ಲಿ ಬರೆದ ದಾಖಲೆಗಳು ಕಣ್ಣಮುಂದಿವೆ. ಆ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಬರೆಯೋಕೆ ಮತ್ತೆ ರಾಕಿ ಭಾಯ್ ಆಗಮನವಾಗ್ತಿದೆ.

ad

ಹೌದು ಕೆಜಿಎಫ್…ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದ ಕನ್ನಡ ಸಿನಿಮಾ.ಕಾರಣಾಂತರಗಳಿಂದ ಕೊಂಚ ತಡವಾಗಿದ್ದ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮತ್ತೆ ಶುರುವಾಗಿದೆ.ಚಿತ್ರದ ಸೆಟ್​ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಸಿನಿಮಾಟೋಗ್ರಾಫರ್ ಭುವನ್ ಗೌಡ ಸೇರಿದಂತೆ ತಂತ್ರಜ್ಞರು ಇದ್ದರು ಚಿತ್ರದ ಶೂಟಿಂಗ್  ಭರದಿಂದ ಸಾಗುತ್ತಿದೆ.

ಇನ್ನು ಮಲ್ಪೆ, ಮಂಗಳೂರು, ಉಡುಪಿ ಸೇರಿದಂತೆ ಬಹುತೇಕ ಕರಾವಳಿ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ  ಚಿತ್ರತಂಡ ಶೂಟಿಂಗ್ ನಡೆಸಲಿದೆ. ಈಗಾಗಲೇ ಚಿತ್ರದ ಹಲವು ವಿಭಿನ್ನ ಫೋಟೋ​ಗಳು ಜೊತೆಗೆ ರಾಕಿಯ ಉದ್ದದ ಕೂದಲು, ದಾಡಿ, ರಾಕಿಭಾಯ್ ರಣಭಯಂಕರ ದರ್ಶನ ಹೇಗಿರಲಿದೆ ಅನ್ನೋದ್ರ ಬಗ್ಗೆ ಸಿಗ್ನಲ್ ನೀಡಿದೆ.ಫೈನಲಿ ಶೂಟಿಂಗ್ ಶುರುವಾಗಿದ್ದು, ಮುಂದಿನ ವರ್ಷಾಂತ್ಯಕ್ಕೆ ತೆರೆಮೇಲೆ ರಾಕಿ ಭಾಯ್ ಅಬ್ಬರ ಶುರುವಾಗಲಿದೆ.