ಐಟಿ ಖೆಡ್ಡಾದಲ್ಲಿ ಖೇಣಿ !! ಹಣ ಮತ್ತು ಮದ್ಯ ಸರ್ಚ್ ಮಾಡುತ್ತಿರುವ ಐಟಿ – ಅಬಕಾರಿ ಟೀಮ್ !!

 

ad

ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಹಾಗೂ ನೈಸ್​ ಮುಖ್ಯಸ್ಥ ಅಶೋಕ್​ ಖೇಣಿ ಮನೆ ಮೆಲೆ ಐಟಿ ಮತ್ತು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆ ಆಸ್ತಿಪಾಸ್ತಿಗಳನ್ನು ಸರ್ಚ್ ಮಾಡುತ್ತಿರುವ ಅಧಿಕಾರಿಗಳು ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಮತ್ತು ನಗದು ವಶಪಡಿಸಿಕೊಂಡಿದ್ದಾರೆ.

 

ನಕಲಿ ಓಟರ್ ಐಡಿ ಹಾಗೂ ಮದ್ಯ, ಹಣ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಐಟಿ ಮತ್ತು ಅಬಕಾರಿ ಅಧಿಕಾರಿಗಳು ಬ್ಯಾಂಕ್  ಕಾಲೋನಿಯಲ್ಲಿರುವ ಅಶೋಕ್​ ಖೇಣಿ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಚುನಾವಣಾ ಅಧಿಕಾರಿಯೂ ಆಗಿರುವ ಬೀದರ್ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಐಟಿ ಮತ್ತು ಅಬಕಾರಿ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ. ನಾಳೆ ಮತಚಲಾವಣೆಯ ದಿನವಾಗಿದ್ದು ಇಂದು ಅಪಾರ ಪ್ರಮಾಣದ ಮದ್ಯ ಮತ್ತು ಹಣವನ್ನು ಶೇಖರಿಸಿಡಲಾಗಿದೆ ಎಂದು ಐಟಿ ಇಲಾಖೆಗೆ ಮಾಹಿತಿ ಬಂದಿತ್ತು. ಐಟಿ ಇಲಾಖೆಯು ಅಬಕಾರಿ ಇಲಾಖೆ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದ್ದು, ಸದಾಶಿವನಗರ, ದಕ್ಷಿಣ ಬೀದರ್ ನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.