ಮಲ್ಲಿಕಾರ್ಜುನ್ ಖೂಬಾಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ!! ಅತೃಪ್ತರ ಮುಂದಿನ ನಡೆ ಏನು?

ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ್ ಖೂಬಾ ಬಿಜೆಪಿ ಟಿಕೇಟು ಗಿಟ್ಟಿಸಿಕೊಂಡ ಬೆನ್ನಲ್ಲೇ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಭಿನ್ನಮತ ಭುಗಿಲೆದ್ದಿದೆ.! ಬಿಜೆಪಿ ಅಭ್ಯರ್ಥಿಎಂದೆ ಬಿಂಬಿತವಾಗಿದ್ದ ಎಂ ಜಿ ಮುಳೆ ,ಸಂಜಯ ಪಟವಾರಿ ,ಸುನೀಲ ಪಾಟೀಲ್ ಬಹಿರಂಗವಾಗಿಯೇ ಮಲ್ಲಿಕಾರ್ಜುನ್ ಖೂಭಾರಿಗೆ ಬಿಜೆಪಿ ಟಿಕೇಟು ಕೊಟ್ಟಿದ್ದಕ್ಕೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಮಾಜಿ ಶಾಸಕ ಹಾಗೂ ಮರಾಠ ಸಮಾಜದ ಮುಖಂಡ ಎಂ.ಜಿ ಮೂಳೆ ಈಗ ಜೆಡಿಎಸ್ ಪಕ್ಷಕ್ಕೆ ಸೇರಿ ಸ್ಪರ್ಧಿಸಲು ಅಣಿಯಾಗುತ್ತಿದ್ದಾರೆ.

ad


ಯಾವುದೆ ಕಾರಣಕ್ಕೆ ಖೂಭಾ ಜೊತೆ ಹೊಂದಾಣಿಕೆ ಪ್ರಶ್ನೆನೇ ಇಲ್ಲಾ ಅಂತಾ ಅವರು ಬಿಟಿವಿಗೆ ಹೇಳಿಕೆ ನೀಡಿದ್ದಾರೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಬರೋಬ್ಬರಿ 40ಸಾವಿರ ಮರಾಠ ಮತದಾರರಿದ್ದು ಇವರೆ ಇಲ್ಲಿ ನಿರ್ಣಾಯಕರಾಗಲಿದ್ದಾರೆ. ಈ ಹಿನ್ನಲೆ ಎಂ.ಜಿ.ಮೂಳೆ ಬಿಜೆಪಿ ಬಂಡಾಯ ಬಿಜೆಪಿಗೆ ಪಡೆಗೆ ಕಂಟಕವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಅಂತ ಹೇಳಲಾಗ್ತಿದೆ. ಶಾಸಕ ಮಲ್ಲಿಕಾರ್ಜುನ್ ಖೂಭಾ ಗೆ ಟಿಕೇಟು ನೀಡಿದ್ದರೆ ನಾನು ಬಿಜೆಪಿಯಲ್ಲಿ ಇರಲ್ಲಾ ಅಂತಾ ಹೇಳಿಕೆ ನೀಡಿದ್ದ ಮುಳೆ,ನಾಳೆ ತಮ್ಮಕಾರ್ಯಕರ್ತರ ಸಭೆ ಕರೆದಿದ್ದು ಜೆಡಿಎಸ್  ಸೇರ್ಪಡೆ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಇದು ಅವರ ಕೊನೆಯ ಚುನಾವಣೆಯಾಗಿದ್ದು ಯಾವುದೆ ಕಾರಣಕ್ಕು ಹಿಂದೆ ಸರಿಯುವ ಪ್ರಶ್ನೆ ಇಲ್ಲಾ ಅಂತಾ ಅವರು ಹೇಳಿದ್ದಾರೆ. ಜಿಲ್ಲೆಯ ಮರಾಠ ಸಮಾಜದ ಪ್ರಮುಖ ನಾಯಕ ನಾನು, ನನಗೆ ಟಿಕೇಟು ಕೊಡಿತ್ತೀನಿ ಅಂತಾ ಹೇಳಿ ಬಿಎಸ್ ವೈ ಪಕ್ಷ ಸೇರಿಸಿಕೊಂಡಿದ್ದರ್ರು.

 

ಆದ್ರೆ ಇಗ ಖುಭಾಗೆ ಟಿಕೇಟು ಕೊಟ್ಟಿದ್ದಾರೆ ನಾನು ಪಕ್ಷದಲ್ಲಿ ಇರಲ್ಲ ನನ್ನ ಸಂಸ್ಕೃತಿ ಖೂಭಾ ಸಂಸ್ಕೃತಿ ಬೇರೆ ಬೇರೆ ಅಂತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಸರಿ ಸುಮಾರು ಮೂರು ಲಕ್ಷ ಮರಾಠ ಮತದಾರರು ಇದ್ದು ಎಂ.ಜಿ.ಮುಳೆಗೆ ಟಿಕೇಟು ನೀಡದೆ ಇರುವುದರಿಂದ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.

 

ವರದಿ: ಬೀದರ್ ದಿಂದ ಓಂಕಾರ ಮಠಪತಿ ಬಿಟಿವಿ