ಸುಮಲತಾ‌ ರಾಜಕೀಯ ಎಂಟ್ರಿ‌ಗೆ ‘ಕಿಚ್ಚ‌’ ರಿಯಾಕ್ಟ್…!

ಸುಮಲತಾ‌ ಅಂಬರೀಶ್ ರಾಜಕೀಯ ಎಂಟ್ರಿ‌ ಬಗ್ಗೆ ಮೊದಲ ಭಾರೀಗೆ ಕಿಚ್ಚ‌ ಸುದೀಪ್ ಅವರು ರಿಯಾಕ್ಟ್ ಮಾಡಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸುಮಲತಾ ಕಣಕ್ಕಿಳೀದಿರೋದು ಕೇವಲ ಕಾರ್ಯಕರ್ತರನ್ನಷ್ಟೇ ಅಲ್ಲ.. ಸ್ಯಾಂಡಲ್​ವುಡ್​ನಲ್ಲೂ ಭಾರೀ ಗೊಂದಲಕ್ಕೆ ಎಡೆಮಾಡಿ ಕೊಟ್ಟಿದೆ. ಸ್ವತಃ ಸಿಎಂ ಪುತ್ರನೇ ಕಣಕ್ಕಿಳಿಯುತ್ತಿರುವುದರಿಂದ ಯಾರನ್ನು ಬೆಂಬಲಿಸಬೇಕು ಅನ್ನೋ ಜಿಜ್ಞಾಸೆ ಶುರುವಾಗಿದೆ. ಸುಮಲತಾ‌ ರಾಜಕೀಯ ಎಂಟ್ರಿ‌ ಬಗ್ಗೆ ಮಾತನಾಡಿದ ಸುದೀಪ್..  ದರ್ಶನ್ ಇರುವಾಗ‌ ಅಲ್ಲಿ ನಾನ್ಯಾಕೆ‌ ? ಕ್ಯಾಂಪೆನ್ ವಿಚಾರವಾಗಿ ನನಗೆ ಬುಲಾವ್ ಬಂದಿಲ್ಲ… ಬಂದರೆ ನಿಮಗೆ ಮೊದಲು ತಿಳಿಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ.