ನನ್ನ ಮೇಲಿನ ಹಲ್ಲೆಯಲ್ಲಿ ಬಿಎಸ್​ವೈ ಪಾತ್ರವಿಲ್ಲ ಎಂದಾದರೇ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ- ವಿನಯ್​​ ಬಹಿರಂಗ ಸವಾಲು

ಬಿಜೆಪಿ ಮೂಲದ ವಿನಯ್​ ಹಾಗೂ ಬಿಎಸ್​ ಯಡಿಯೂರಪ್ಪ ಆಪ್ತ ಸಂತೋಷ ನಡುವಿನ ಕಿತ್ತಾಟ ಸಧ್ಯಕ್ಕೆ ಕೊನೆಗೊಳ್ಳುವ ಲಕ್ಷಣವೇ ಇಲ್ಲ. ಹೌದು ಪ್ರಕರಣದ ಸಂತ್ರಸ್ತ ವಿನಯ್​ ಇಂದು ತಮ್ಮ ಕಿಡ್ನಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮೀ ಲೇಔಟ್​ ಪೊಲೀಸ್ ಠಾಣೆಗೆ ಹಾಜರಾಗಿದ್ದು, ವಿನಯ್ ಪತ್ನಿ ಬಿಎಸ್​ವೈಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ವಿವರಣೆ ನೀಡಿದ್ದಾರೆ.

ad


ಕಳೆದ ಕೆಲ ದಿನಗಳ ಹಿಂದೆ ವಿನಯ್ ಕಿಡ್ನಾಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕೋರಿ ಸಂತ್ರಸ್ತ ವಿನಯ್ ಪತ್ನಿ ಶೋಭಾ ವಿನಯ್​​, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ವಿನಯ್​ ಮೇಲಾದ ದೌರ್ಜನ್ಯ ಉಲ್ಲೇಖಿಸಿದ್ದ ಶೋಭಾ, ನೀವು ಸಂತೋಷನನ್ನು ರಕ್ಷಿಸುತ್ತಿದ್ದೀರಿ. ಇದರಿಂದ ನಾವು ಬದುಕುವುದೆ ದುಸ್ತರವಾಗಿದೆ ಎಂದು ಆರೋಪಿಸಿದ್ದರು. ಅದೇ ಪತ್ರವನ್ನು ಶೋಭಾ ಅವರು, ಮಹಿಳಾ ಆಯೋಗ, ಸಂಸದರು, ನರೇಂದ್ರ ಮೋದಿ ಸೇರಿದಂತೆ ಹಲವರಿಗೆ ಕಳುಹಿಸಿದ್ದರು. ಇದೀಗ ಈ ಪತ್ರವನ್ನು ಗಂಭೀರವಾಗಿನ ಪರಿಗಣಿಸಿರುವ ಮಹಾಲಕ್ಷ್ಮೀ ಲೇಔಟ್​ ಪೊಲೀಸರು ವಿವರಣೆ ನೀಡುವಂತೆ ವಿನಯ್​ ಹಾಗೂ ಶೋಭಾಗೆ ನೋಟಿಸ್​ ಜಾರಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಹಾಜರಾಗಿರುವ ವಿನಯ್ ವಿವರಣೆ ನೀಡಿದ್ದಾರೆ.
ಇನ್ನು ಪೊಲೀಸರಿಗೆ ವಿವರಣೆ ನೀಡಿದ ಬಳಿಕ ಮಾತನಾಡಿದ ವಿನಯ್​, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಯಡಿಯೂರಪ್ಪ ಹಾಗೂ ಸಂತೋಷ್ ನನ್ನ ಮೇಲಿನ ಹಲ್ಲೆ ಪ್ರಕರಣದಲ್ಲಿ ಅವರ ಪಾತ್ರವಿಲ್ಲ ಅಂತ ಧರ್ಮಸ್ಥಳದ ಮಂಜುನಾಥನ ಮುಂದೆ ಪ್ರಮಾಣ ಮಾಡಲಿ ಅಂತ ಬಹಿರಂಗ ಸವಾಲು ಹಾಕಿದ್ದಾರೆ. ನಾನು 10 ನೇ ತಾರೀಖಿನವರೆಗೆ ಕಾಲಾವಕಾಶ ನೀಡುತ್ತೇನೆ. ಅಷ್ಟರಲ್ಲಿ ಯಡಿಯೂರಪ್ಪ ಉತ್ತರಿಸದಿದ್ದಲ್ಲಿ ಮುಂದೆ ಕಾನೂನು ರೀತಿ ಹೋರಾಟಕ್ಕೆ ನಾನು ಸಿದ್ಧ ಎಂದರು.