ಮಕ್ಕಳನ್ನು ಅಪಹರಿಸಿ ಅಂಗಾಂಗ ಕದಿಯುವ ಆರೋಪ- ಆ ಗ್ರಾಮಸ್ಥರು ಏನು ಮಾಡಿದ್ರು ಗೊತ್ತಾ?!

 

ad

ಕಿಡ್ನಿ,ಹೃದಯಕ್ಕಾಗಿ ಮಕ್ಕಳನ್ನು ಹೊತ್ತೊಯ್ದು ಹತ್ಯೆ ಮಾಡಲಾಗುತ್ತಿದೆ ಎಂಬ ವದಂತಿ ಕೇಳಿಬಂದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಗಡಿಭಾಗದ ಜನರು ರಾತ್ರಿ ಇಡಿ ಕಾವಲು ಕಾಯ್ದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡನದ ಆಂಧ್ರ ಗಡಿಭಾಗದಲ್ಲಿ ಮಕ್ಕಳನ್ನು ಹೊತ್ತೊಯ್ದು ಹತ್ಯೆ ಮಾಡಿ, ಅವರ ಕಿಡ್ನಿ,ಹೃದಯ ತೆಗೆಯಲಾಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು.

 

ಇದಕ್ಕೆ ಸಂಬಂಧಿಸಿದಂತೆ ವಾಟ್ಸಪ್​ನಲ್ಲಿ ಶಂಕಿತ ಅಪಹರಣಕಾರರ ಪೋಟೋಗಳು ಹರಿದಾಡಲು ಆರಂಭಿಸಿದ್ದವು. ಇದರಿಂದ ಬೆದರಿದ ಗ್ರಾಮಸ್ಥರು, ಮಕ್ಕಳನ್ನು ಹೊತ್ತೊಯ್ಯುತ್ತಾರೆ ಎಂಬ ಶಂಕೆಯಿಂದ ರಾತ್ರಿಯಿಂದ ಊರನ್ನೇ ಕಾವಲು ಕಾಯ್ದಿದ್ದಾರೆ. ಇನ್ನು ವದಂತಿಗೆ ಪುಷ್ಠಿ ಎಂಬಂತೆ ಪೊನ್ನಸಮುದ್ರದ ಯುವತಿಯೊರ್ವಳು ಬಹಿರ್ದೆಸೆಗೆ ತೆರಳಿದ್ದಾಗ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಇದಲ್ಲದೇ ಅಪರಿಚಿತರು ಯಾರೂ ಕೂಡ ಗ್ರಾಮಕ್ಕೆ ಬಾರದಂತೆ ಗ್ರಾಮಸ್ಥರು ನೋಡಿಕೊಳ್ಳುತ್ತಿದ್ದಾರೆ. ಈ ವದಂತಿಗೆ ಯಾವುದೇ ದಾಖಲೆಗಳಿಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಹರಡಿದ ಸುದ್ದಿಯನ್ನೇ ಗ್ರಾಮಸ್ಥರು ನಂಬಿದ್ದಾರೆ ಎನ್ನಲಾಗುತ್ತಿದೆ.