ಭಯೋತ್ಪಾದಕ ಪರ ನಿಲ್ಲುವವರನ್ನು ಗುಂಡಿಟ್ಟುಕೊಲ್ಲಿ- ಭಯೋತ್ಪಾದನೆ ವಿರುದ್ಧ ರಾಜ್ಯಪಾಲ ವಜೂಬಾಯಿ ವಾಲಾ ಗುಡುಗು

ದೇಶದ್ರೋಹಿಗಳನ್ನು ಮೂರೇ ದಿನದಲ್ಲಿ ನೇಣಿಗೆ ಹಾಕಬೇಕು. ಅವರ ಬಗ್ಗೆ ಯಾವುದೇ ಪತ್ರಿಕೆಯಲ್ಲೂ ವರದಿ ಬರಬಾರದು. ದೇಶದ್ರೋಹ ಪ್ರಕರಣಗಳ ತ್ವರೀತ ವಿಲೇವಾರಿಗೆ ಪ್ರತ್ಯೇಕವಿರಬೇಕು. ದೇಶದ್ರೋಹಿಗಳ ಪರವಾಗಿ ವರ್ಷಾಚರಣೆ ಮಾಡುವವರನ್ನು ಗುಂಡಿಟ್ಟು ಕೊಲ್ಲಬೇಕು. ಹೀಗೆಂದು ರಾಜ್ಯಪಾಲ ವಜೂಬಾಯಿ ವಾಲಾ ಗುಡುಗಿದ್ದಾರೆ. ಇದೇ ಮೊದಲ ಭಾರಿಗೆ ವಜೂಬಾಯಿ ವಾಲಾ ಅವರ ಖಡಕ್ ಮಾತುಗಳನ್ನು ಕೇಳಿ ಜನ ಅಚ್ಚರಿಗೊಂಡಿದ್ದು, ಮತ್ತೊ

ಮ್ಮೆ ಬಿಜೆಪಿಯ ಎಲ್ಲ ಸ್ತರದ ನಾಯಕರು ಭಯೋತ್ಪಾದನೆಯ ವಿರುದ್ಧ ತಮ್ಮ ಸಮರ ಸಾರಿರೋದು ಸಾಬೀತಾದಂತಾಗಿದೆ.
ನಿನ್ನೆ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ 2nd ಕಾನ್ಫರೆನ್ಸ್ ಆಫ್ ಸೆಂಟ್ರಲ್ ಗೌರ್ನಮೆಂಟ್ ಕೌನ್ಸಿಲ್ ಆಫ್ ಸೌತರ್ನ್ ರಿಜಿಯನ್ 2017 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಜೂಬಾಯಿವಾಲಾ,ಭಯೋತ್ಪಾದಕ ಕಸಬ್ ಸಾವಿನ ದಿನದಂದು ದೇಶದಲ್ಲಿ ವರ್ಷಾಚರಣೆ ಮಾಡುವವರನ್ನ ಮೊದಲು ಬಂದೂಕಿನಿಂದ ಉಡಾಯಿಸಬೇಕು. ಯಾವ ರಾಷ್ಟ್ರದಲ್ಲಿ ಭದ್ರತೆ ಬಲಿಷ್ಟವಾಗಿರುತ್ತದೆಯೊ ಆ ರಾಷ್ಟ್ರ ಅಭಿವೃದ್ದಿ ಯಾಗುತ್ತದೆ.

ಇದಕ್ಕೆ ಉತ್ತಮ ಉದಾಹರಣೆ ಇಸ್ರೇಲ್.ಇಸ್ರೇಲ್ ಚಿಕ್ಕ ದೇಶವಾದ್ರು ಅಂತಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಟವಾಗಿದೆ.
ನಮ್ಮಲ್ಲೂ ದೇಶ ಭಕ್ತಿ ಇದೆ. ನಮ್ಮಲ್ಲಿ ಕಾನೂನು ಬಲಿಷ್ಟವಾಗಿದೆ, ಆಯುಧಗಳಿವೆ, ಶಾಸಕಾಂಗ ಬಲಿಷ್ಟವಾಗಿದೆ.ಆದ್ರೆ ವಾಸ್ತವದ ವಿಚಾರವೆ ಬೇರೆಯಾಗಿದೆ.
ರಾಷ್ಟ್ರ ವಿರೊಧಿ ಕಸಬ್ ಪ್ರಕರಣದಲ್ಲಿ ಎನಾಯ್ತು?
ಹೈಕೋರ್ಟ್ ನಲ್ಲಿ ಪ್ರಕರಣ ಬಂತು, ನಂತರ ಸೂರ್ಪೀಂ ಕೋರ್ಟ್ ಗೆ ಪ್ರಕರಣ ಹೊಯ್ತು
ಅಲ್ಲೂ ಸಹ ತುಂಬಾ ಸಮಯ ತೆಗೆದುಕೊಂಡ್ರು.ನಂತರ ರಾಷ್ಟ್ರಪತಿಗಳ ಹತ್ತಿರ ಕ್ಷಮಾದಾನಕ್ಕೆ ಅಂತ ಕಳುಹಿಸಲಾಯಿತು.
ಇಂತಹ ಕ್ರಿಮಿನಲ್ ಗಳನ್ನ ಕೇವಲ ಮೂರು ದಿನಗಳಲ್ಲಿ ನೇಣಿಗೆ ಹಾಕಬೇಕು ಎಂದು ಅವರು ಅಭಿಪ್ರಾಯಿಸಿದ್ದಾರೆ.
ಅಲ್ಲದೇ, ದೇಶದ್ರೋಹಿಗಳ ನೇಣಿನ ಬಗ್ಗೆ ಯಾವುದೆ ಪತ್ರಿಕೆಯಲ್ಲೂ ಬರಬಾರದು.
ದೇಶ ದ್ರೋಹಿಗಳ ತ್ವರಿತಗತಿಯ ವಿಚಾರಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು.
ಅಫ್ಜಲ್ ಗುರು ಪ್ರಕರಣದಲ್ಲಿ ಇದೇ ರೀತಿ ಆಯ್ತು.ಇಂತಹವರಿಗಾಗಿ ವಿಶೇಷ ಕಠಿಣ ಕಾನೂನನ್ನ ತಯಾರಿಸಬೇಕು ಎಂದು ವಜೂಬಾಯಿ ವಾಲಾ ಹೇಳಿದ್ದಾರೆ.
ಈ‌‌ ಮಧ್ಯೆ ಗುಜರಾತ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರ‌ ಸ್ಥಾಪಿಸೋದು ಬಹುತೇಕ ಖಚಿತವಾಗಿದ್ದು, ವಜೂಬಾಯಿ‌ವಾಲಾ ಗುಜರಾತ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಎಂಬ ಮಾತು‌ಕೇಳಿ ಬಂದಿದೆ. ಹೀಗಿರುವಾಗಲೇ ವಜೂಬಾಯಿ ವಾಲಾ ಅಪ್ಪಟ ಹಿಂದುತ್ವ ಹಾಗೂ ದೇಶಭಕ್ತಿಯ ಆಕ್ರೋಶ ಮಾತುಗಳನ್ನಾಡಿದ್ದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.