ಕೋಳಿ ಮಾರಾಟ ಮಾಡ್ತಾ ಇದ್ದವನ ಹತ್ತಿರ ಇರೋ‌ ಹಣವನ್ನು ನೋಡಿದ ಕೋಳಿ ಖರೀದಿ ಮಾಡ್ತಾ ಇದ್ದವನು ಏನು ಮಾಡಿದ ಗೊತ್ತಾ ಹಾಗಾದ್ರೆ ಈ ಸ್ಟೋರಿ ನೋಡಿ….

ಕೊಲೆ ಆರೋಪಿಗಳ ಬಂಧನ.. ಸಾಲಕ್ಕಾಗಿ ಕೊಲೆ ಮಾಡಿದ ಪಾತಕಿಗಳು…

ad


 

ಆತ ದಿನಾಲು ತನ್ನ ಕೋಳಿ ಫಾರ್ಮ್ ನಿಂದ ಕೋಳಿಗಳನ್ನು ತಂದು‌ ಹುಬ್ಬಳ್ಳಿಯ‌ ಚಿಕನ್ ಸೆಂಟರಗಳಿಗೆ ಮಾರಾಟ ಮಾಡ್ತಾಇದ್ದ. ಆತನ ಬಳಿ ಸಾಕಷ್ಟು ಹಣ ಇರೋದನ್ನು ನೋಡಿದ ಕೋಳಿ ಖರೀದಿ ಮಾಡುವಾತ ಹಣಕ್ಕಾಗಿ ಕೋಳಿ ಮಾರಾಟ ಮಾಡುವಾತನಿಗೆ ಸ್ಕೆಚ್ ಹಾಕಿದ್ದ….

ಕೋಳಿ ಖರೀದಿ ಮಾಡ್ತಿದ್ದ ಅಬ್ಜುರ್ ನಾಲಬಂದಿ ಸಾಲವನ್ನು ಮಾಡಿಕೊಂಡು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದ. ವ್ಯಾಪಾರಸ್ಥ ಪಾಂಡುರಂಗ ಪರಿವಾರ ಕೊಲೆ ಮಾಡಿದ್ರೆ ಹಣ ಸಿಗುತ್ತೆ ಅಂದುಕೊಂಡು ಆತನ ಸ್ನೇಹಿತನೊಂದಿಗೆ ವ್ಯಾಪಾರಸ್ಥನನ್ನು ಕೊಲೆ ಮಾಡಿ ಕಾರಿನಲ್ಲಿ ‌ಮೃತ ದೇಹವನ್ನು ಇಟ್ಟು ಸ್ಥಳದಿಂದ ಪರಾರಿಯಾಗಿದ್ರು…

ಹುಬ್ಬಳ್ಳಿಯ ಗಬ್ಬೂರ ರಸ್ತೆಯಲ್ಲಿ ಕಾರಿನಲ್ಲಿ ಮೃತ ದೇಹ ಪತ್ತೆಯಾಗಿದನ್ನು‌‌ ನೋಡಿದ ಸ್ಥಳೀಯರು‌ ಕಸಬಾ ಪೇಟೆ
ಪೊಲೀಸರಿಗೆ ಮಾಹಿತಿ ನೀಡಿದ್ರು. ಅನುಮಾನಾಸ್ಪದ ಸಾವು ಅಂತಾ ಪ್ರಕರಣ ದಾಖಲಿಸಿಕೊಂಡು ಪೋಸರು ವೈಜ್ಞಾನಿಕವಾಗಿ ತನಿಖೆ ನಡೆಸಿದಾದ ಕಿಲಾಡಿ ಆರೋಪಿಗಳು ಪತ್ತೆಯಾದ್ರು..

ಆಗ ಆರೋಪಿ 23 ವರ್ಷದ ಅಬ್ಜುರ್ ನಾಲಬಂದ ಹಾಗೂ ಆತನಿಗೆ ಸಹಾಯ ಮಾಡಿದ 24 ವರ್ಷದ ಅರೀಫಖಾನ್ ಮಂತ್ರೋಡಿ ಬಂಧಿತ ಆರೋಪಿಗಳು. ಬಂಧಿತರಿಂದ 53 ಸಾವಿರ ನಗದು, ಕೃತ್ಯಕ್ಕೆ ಬಳಸಿದ ಕಬ್ಬಿಣದ ಸಲಾಕೆ, ರಾಡ್ ಗಳು‌ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಪೆಬ್ರವರಿ 26 ರಂದು ನಗರದ ಗಬ್ಬೂರು ರಸ್ತೆಯ ಪಕ್ಕದಲ್ಲಿ ಸವಣೂರು ಪ್ಲಾಟ್ ಬಳಿ ಕೋಳಿ ವ್ಯಾಪಾರಿಯಾಗಿದ್ದ ಪಾಂಡುರಂಗ ಪರಿವಾರ ಎಂಬುವವರನ್ನು ಕೊಲೆ ಮಾಡಿ ಶವವನ್ನು ಇಂಡಿಕಾ ಕಾರ್ ನಲ್ಲಿ ಬಿಟ್ಟು ಹೋಗಿದ್ದರು.
ಆರೋಪಿ ಅಬುಜರ್ ಚಿಕನ್ ವ್ಯಾಪಾರಿಯಾಗಿದ್ದು, ಪಾಂಡುರಂಗ ಅವರಿಂದ ಸಾಲ ಮಾಡಿ ಕೋಳಿಯನ್ನು ತಗೆದುಕೊಂಡು ಚಿಕನ್ ವ್ಯಾಪಾರ ಮಾಡುತ್ತಿದ್ದ.‌

ಹೀಗಾಗಿ ಆರೋಪಿ ಅಬುಜರ್ 24 ಸಾವಿರ ಸಾಲವನ್ನು ಕೊಡಬೇಕಿತ್ತು. ಸಾಲ ಮರುಪಾವತಿ ಮಾಡಲಾಗದೆ. ಪಾಂಡುರಂಗನನ್ನು‌ ಕೊಲೆ ಮಾಡಿದರೆ ಸಾಲವು ತೀರುತ್ತೆ. ಆತ ನಿತ್ಯ ಲಕ್ಷಾಂತರ ರೂಪಾಯಿ ವ್ಯಾಪಾರ ಮಾಡುತ್ತಾನೆ.‌ ಆತನನ್ನು ಕೊಲೆ ಮಾಡಿದ್ರೆ ಹಣವು ಸಿಗುತ್ತದೆ ಎಂದು ತನ್ನ ಸ್ನೇಹಿತ ಆರೀಫ್‌ ಜೊತೆ ಸೇರಿ ಕೊಲೆ ಮಾಡಿದ್ದ.‌

ತನ್ನ ಪ್ಲಾನ್‌ನಂತೆ ಫೆ. 25 ರಂದು ಸಾಲ ನೀಡುವದಾಗಿ ಫೋನ್ ಮಾಡಿ ತನ್ನ ಅಂಗಡಿಗೆ ಕರೆಸಿಕೊಂಡು ಆತನಿಗೆ ಸ್ವಲ್ಪ ಹಣ ನೀಡಿದ್ದಾರೆ. ಸಾಲ ‌ಕೊಟ್ಟ ಹಣ ಎಣಿಸುತ್ತಿರುವಾಗ ಪಾಂಡುರಂಗನ ‌ತೆಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಆತನ ಬಳಿಯಿದ್ದ 56 ಸಾವಿರ ತಗೆದುಕೊಂಡು ಶವವನ್ನು ಕಾರಿನಲ್ಲಿ ಬಿಟ್ಟು ಹೋಗಿದ್ದರು.‌

ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದ ಕಸಬಾಪೇಟೆ ಠಾಣೆ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ಒಂದುಸಾರಿ ಆರೋಪಿಗಳ ಹಿಂದೆ ಬಿದ್ರೆ ಕೊಲೆ ಮಾಡಿದ ಪಾತಕಿಗಳು ಎಲ್ಲಿಯಿದ್ರು ಸಹ‌ ನ್ಯಾಯ ದೇವತೆ ಮುಂದೆ ನಿಲ್ಲಿಸ್ತಾರೆ ಎನ್ನುವದಕ್ಕೆ ಇದೊಂದು ಉದಾಹರಣೆ..

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ..