ಕೇಂದ್ರ ಸರ್ಕಾರ ಒಡೆತನದ ಬೆಮಲ್ ಕಾರ್ಖಾನೆ​ ಖಾಸಗೀಕರಣ ವಿರೋಧಿಸಿ ಇಂದು ಕೋಲಾರ ಜಿಲ್ಲಾ ಬಂದ್​ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಹೀಗಾಗಿ ಜಿಲ್ಲೆಯಲ್ಲಿಂದು ಮುನ್ನೆಚರಿಕೆ ಕ್ರಮವಾಗಿ ಪೊಲೀಸ್​ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಂದ್​ ತೀವ್ರ ಸ್ವರೂಪ ಪಡೆದುಕೊಂಡ್ರೆ ಅಂಗಡಿ ಮುಗ್ಗಟ್ಟು, ಬಸ್​ ಸೇರಿದಂತೆ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ ಅಂತಾ ಕೋಲಾರ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಮಾಹಿತಿ ನೀಡಿದ್ದಾರೆ. ಇನ್ನು ಬಯಲು ಸೀಮೆ ಜಿಲ್ಲೆಯಲ್ಲಿರೋ ಏಕೈಕ ಬೃಹತ್ ಕೈಗಾರಿಕೆ ಬೆಮಲ್ ಕಾರ್ಖಾನೆಯನ್ನ ಖಾಸಗೀಕರಣ ಮಾಡಲು ಹೊರಟಿರೋ ಕೇಂದ್ರ ಸರ್ಕಾರದ ನಿಲುವಿಗೆ ಕೋಲಾರ ಜಿಲ್ಲೆಯಾದ್ಯಂತ ಆಕ್ಷೇಪ ವ್ಯಕ್ತವಾಗಿದು, ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಸಂಘಟನೆಯ ಮುಖಂಡರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here