ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ಡಾಕ್ಟರ್​​- ಪಿಎಸ್​ಐ!!

ಕರ್ನಾಟಕದಲ್ಲಿ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಮತಸಮರದ ಕಣ ರಂಗೇರುತ್ತಿದೆ. ಈಗಾಗಲೇ ಮತದಾರರನ್ನು ಸೆಳೆಯುವ ಕಸರತ್ತಿನಲ್ಲಿರುವ ಜನಪ್ರತಿನಿಧಿಗಳಿಗೆ ಧೀಡಿರ ಚುನಾವಣೆ ಕಣಕ್ಕಿಳಿಯುತ್ತಿರುವ ಅಭ್ಯರ್ಥಿಗಳು ತಲೆನೋವಾಗಿ ಪರಿಣಮಿಸುತ್ತಿದ್ದಾರೆ.

 ಇದೀಗ ಈ ಸಾಲಿಗೆ ಕೋಲಾರದ ಸರ್ಕಾರಿ ವೈದ್ಯ ಡಿ.ಕೆ.ರಮೇಶ್​ ಹೊಸ ಸೇರ್ಪಡೆಯಾಗಿದ್ದಾರೆ. ಹೌದು ರಾಜಕಾರಣಿಗಳ ನಿದ್ದೆಗೆಡಿಸಲು ಹಲವು ರಾಜಕೀಯೇತರ ಕ್ಯಾಂಡಿಡೇಟ್​​ಗಳು ಕಣಕ್ಕಿಳಿಯುತ್ತಿದ್ದು, ಕೋಲಾರದ ಎಸ್​ಎನ್​ಆರ್​ ಸರ್ಕಾರಿ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಿ.ಕೆ.ರಮೇಶ್​ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂಧಾಗಿದ್ದಾರೆ. ರಮೇಶ್​ ಕೋಲಾರದಲ್ಲಿ ಜೆಡಿಎಸ್​ ಟಿಕೇಟ್​ ಆಕಾಂಕ್ಷಿಯಾಗಿದ್ದು, ಜೆಡಿಎಸ್​ನಿಂದ ಸೀಟು ಸಿಗದಿದ್ದರೇ ಪಕ್ಷೇತರರಾಗಿ ಕಣಕ್ಕಿಳಿಯಲು ರಮೇಶ್​ ಸಿದ್ದವಾಗಿದ್ದಾರೆ.

 

ಇನ್ನು ಬೆಳಗಾವಿಯಲ್ಲಿ ಪಿಎಸ್​ಐ ಹುದ್ದೆ ತ್ಯಜಿಸಿರುವ ಬಸವರಾಜ ಬಿಸನಕೊಪ್ಪ ಎಂಬುವವರು ಮಾಜಿ ಸಚಿವ ಲಕ್ಷ್ಮಣ ಸವದಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಎಚ್​ಡಿಕೆ ಜೊತೆ ಮಾತುಕತೆ ನಡೆಸಿರುವ ಬಸವರಾಜು ಜೆಡಿಎಸ್​ನಿಂದಲೇ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ವರ್ಷಗಳಿಂದ ಜನರನ್ನು ಒಲೈಸಿಕೊಂಡು ರಾಜಕಾರಣ ಮಾಡಿಕೊಂಡು ಬರುತ್ತಿರುವ ರಾಜಕಾರಣಿಗಳಿಗೇ ಧೀಡಿರ ಕಣಕ್ಕಿಳಿಯುತ್ತಿರುವ ಇಂಥ ಅಭ್ಯರ್ಥಿಗಳು ತಲೆನೋವಾಗಿ ಪರಿಗಣಿಸುತ್ತಿರೋದು ಮಾತ್ರ ಸುಳ್ಳಲ್ಲ.