ರೈಲಿನಲ್ಲಿ “ಶ್ರೀನಿವಾಸ ಕಲ್ಯಾಣ”!! ಕೋಲಾರ ಟ್ರೈನ್ ನಲ್ಲಿ ಉಚಿತ ಉಪಹಾರ ಪೊಟ್ಟಣ !!

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದಂತೆ ಟಿಕೆಟ್ ಅಕಾಂಕ್ಷಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ.

ad


ಕೋಲಾರ ಕೆಜಿಎಫ್​ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್. ಶ್ರೀನಿವಾಸ ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ಸಾವಿರಾರು ಜನರನ್ನು ಸೆಳೆಯಲು ತಮ್ಮದೇ ಹೊಸ ತಂತ್ರವನ್ನು ಅನುಸರಿಸಿದ್ದಾರೆ. ರೈಲಿನಲ್ಲಿ ಪ್ರತಿನಿತ್ಯ ಪ್ರಯಾಣ ಮಾಡುವ ಮತದಾರರನ್ನು ಟಾರ್ಗೆಟ್ ಮಾಡಲು ಪ್ರಯಾಣಿಕರಿಗೆ ಟಿಫನ್ ಬ್ಯಾಗ್ ನೀಡಿ ಮತದಾರರ ಮನಸ್ಸು ಗೆಲ್ಲಲು ಕಸರತ್ತು ನಡೆಸಿದ್ದಾರೆ.

 

ಸೀರೆ ಆಯಿತು ಕುಕ್ಕರ್ ಆಯಿತು ಈಗ ಟಿಫನ್ ಬ್ಯಾಗ್ ಭಾಗ್ಯ ಅಂಥ ಜನರು ಮಾತನಾಡುತ್ತಿದ್ದಾರೆ. ಯುಗಾದಿ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ರೈಲಿನಲ್ಲಿ ಪ್ರಯಾಣಿಸುವ ಜನರಿಗೆ ಟಿಫನ್ ಬ್ಯಾಗ್ ನೀಡುತ್ತಿದ್ದೇನೆ. ಇದರಲ್ಲಿ ಯಾವುದೇ ಚುನಾವಣೆ ಗೀಮಿಕ್​ ಇಲ್ಲ ಎಂದ್ರು. ಚುನಾವಣೆ ಗಿಮಿಕ್​ ಆದ್ರೂ ಅಗಲಿ, ಸಮಾಜಸೇವೆನಾದ್ರೂ ಆಗ್ಲಿ, ನಮಗಂತೂ ಹೊಸ ಬ್ಯಾಗ್ ಸಿಕ್ಕಿತು ಎನ್ನುವ ಖುಷಿಯಿಂದ ಪ್ರಯಾಣಿಕರು ಬ್ಯಾಗ್ ತೆಗೆದುಕೊಂಡು ಮನೆ ಕಡೆ ಹೊರಟ್ರು.