ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಾರ್ಮಿಕನೊಬ್ಬನ ಎರಡು ಕೈಗಳು ಯಂತ್ರಕ್ಕೆ ಸಿಲುಕಿ ಎಂಟು ನಿಮಿಷಗಳ ಕಾಲ ವ್ಯಕ್ತಿ ನರಳಾಡಿದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರದ ಮಾಲೂರು ಕೈಗಾರಿಕಾ ಪ್ರದೇಶದ ದ್ವಿಚಕ್ರ ವಾಹನಗಳ ಬಿಡಿ ಭಾಗ ತಯಾರಿಕೆ ಮಾಡುವ ಸಾಯಿನಾಥ್​ ಇಂಡಸ್ಟ್ರಿಸ್​ನಲ್ಲಿ ಕಳೆದ ಸೆಪ್ಟೆಂಬರ್​​ 8 ರಂದು ನಡೆದಿದೆ. ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇನ್ನು ಕಾರ್ಖಾನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದು, ಯಾರೊಬ್ಬರಿಗೂ ಅಗತ್ಯವಾದ ಕಾರ್ಮಿಕ ಸುರಕ್ಷತಾ ಕ್ರಮಗಳು ಸಿಗುತ್ತಿಲ್ಲ. ಐದಕ್ಕೂ ಹೆಚ್ಚು ಕಾರ್ಮಿಕರು ಸಾಯಿನಾಥ್​ ಇಂಡಸ್ಟ್ರಿಸ್​ನಲ್ಲಿ ಕೆಲ್ಸ ಮಾಡುವ ವೇಳೆ ಯಂತ್ರಗಳಿಗೆ ಕೈ ಕೊಟ್ಟು ತಮ್ಮ ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಬೇರೆ ಕಡೆ ಕೆಲ್ಸ ಮಾಡಲು ಆಗ್ದೇ ಅದೇ ಕಾರ್ಖಾನೆಯಲ್ಲಿ ಸಹಾಯದ ಹಣಕ್ಕಾಗಿ ಕಾದು ಬೇಸರಗೊಂಡಿದ್ದಾರೆ. ಹೀಗಾಗಿ ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿ ಲೋಕೇಶ್​ ಸಾಯಿನಾಥ್​ ಇಂಡಸ್ಟ್ರಿಸ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ್ರು.
=========
ಬೈಟ್:ಲೋಕೇಶ್​, ತಾಲೂಕು ಕಾರ್ಮಿಕ ಅಧಿಕಾರಿ
ಬೈಟ್:ರಾಜನ್​ನಾಯಕ್​, ನೊಂದ ಕಾರ್ಮಿಕ
=========

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here