ಮತದಾರರನ್ನು ಸೆಳೆಯಲು ಅಕ್ಕಿ-ಎಣ್ಣೆ-ಸೀರೆ-ಬಾಡೂಟ- ರಂಗೇರತಿದೆ ಎಲೆಕ್ಷನ್​ ಪಾಲಿಟಿಕ್ಸ್!!

ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಸೆಳೆಯಲು ಜನಪ್ರತಿನಿಧಿಗಳು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಇದಕ್ಕೆ ತಾಜಾ ಸಾಕ್ಷಿ ಸಿಕ್ಕಿರೋದು ಮಂಡ್ಯ ಕ್ಷೇತ್ರದಲ್ಲಿ.

ಹೌದು ಮಂಡ್ಯದ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಇಂದು ಇಂಡವಾಳು ಗ್ರಾಮದಲ್ಲಿ ಸಾವಿರಾರು ಕಾರ್ಯಕರ್ತರಿಗೆ ಬಾಡೂಟ ಹಾಕಿಸುವ ಮೂಲಕ ಭರ್ಜರಿ ಚುನಾವಣೆ ಗಿಮಿಕ್ ಆರಂಭಿಸಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ.ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾಗಿರುವ ರಮೇಶ್‍ ಬಂಡಿಸಿದ್ದೇಗೌಡ ಜೆಡಿಎಸ್‍ನಿಂದ ಈಗಾಗಲೇ ಅಮಾನತ್ತಾಗಿದ್ದಾರೆ. ಹೀಗಾಗಿ ಸಚ್ಚಿದಾನಂದ ಅವರಿಗೆ ಕಾಂಗ್ರೆಸ್ ಟಿಕೇಟ್​​ ಖಚಿತ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಸಚ್ಚಿದಾನಂದ ಅವರು ಭರ್ಜರಿಯಾಗಿ ಮೊಟ್ಟೆ, ಚಿಕನ್, ಮಟನ್, ಗೀರೈಸ್ ಸೇರಿದಂತೆ ಬಗೆ ಬಗೆಯ ಭಕ್ಷ್ಯ ಭೋಜನದ ವ್ಯವಸ್ಥೆ ಮಾಡಿದ್ದಾರೆ.

 

ಇನ್ನು ಕೋಲಾರದ ಮಾಲೂರಿನಲ್ಲೂ ಮತದಾರರನ್ನು ಸೆಳೆಯುವ ಪ್ರಯತ್ನ ಜೋರಾಗಿಯೇ ನಡೆದಿದ್ದು, ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಕೆ.ವೈ.ನಂಜೇಗೌಡ ಮತದಾರರನ್ನ ಸೆಳೆಯಲು ಹೊಸ ತಂತ್ರ ರೂಪಿಸಿದ್ದಾರೆ. ಮನೆ ಮನೆ ಕಾಂಗ್ರೆಸ್ ಹೆಸರಲ್ಲಿ ಭೇಟಿ ನೀಡುತ್ತಿರುವ ನಂಜೇಗೌಡ, ಪ್ರತಿ ಮನೆಗೂ ಐದು ಕೆ.ಜಿ ಅಕ್ಕಿ, ಬೆಲ್ಲ, ಎಣ್ಣೆ ಒಂದೊಂದು ಸೀರೆ ಕೊಡ್ತಿದ್ದಾರೆ. ಈ ರೀತಿ ಐಟಮ್ಸ್ ಕೊಡೋ ಮೂಲಕ ಮತದಾರರನ್ನ ಸೆಳೆಯೋಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಚುನಾವಣೆ ರಾಜಕಾರಣ ರಂಗೇರುತ್ತಿದ್ದು ಯಾವ ಹಂತ ತಲುಪುತ್ತೋ ಕಾದು ನೋಡಬೇಕಿದೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here