ಹಕ್ಕು ಚಲಾಯಿಸಲು ಬೀದಿಗಿಳಿದ ಕಾಲಿವುಡ್! ಕ್ಯೂನಲ್ಲಿ ನಿಂತು ಸ್ಟಾರ್ ವೋಟಿಂಗ್!!

ಲೋಕಸಭಾ ಚುನಾವಣೆಯು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಚೆನ್ನೈನಲ್ಲಿಯೂ ನಡೆಯುತ್ತಿದೆ. ದೇಶದಲ್ಲಿ 14ರಾಜ್ಯಗಳಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುಣಾವಣೆಯಲ್ಲಿ ಸ್ಯಾಂಡಲ್ ವುಡ್ ತಾರೆಯರಂತೆ ಕಾಲಿವುಡ್ ನ ತಾರೆಯರು ಸಹ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

ಸರತಿ ಸಾಲಿನಲ್ಲಿ ಸಾಮಾನ್ಯರಂತೆ ಸ್ಟಾರ್ ನಟರು ಹಾಗೂ ಅವರ ಪತ್ನಿಯರು ನಿಂತು ವೋಟ್​ ಹಾಕಿದ್ದಾರೆ. ಅಲ್ಲದೇ, ಸೂರ್ಯ, ಪತ್ನಿ ಜ್ಯೋತಿಕ ,ತಮ್ಮ ಕಾರ್ತಿಕ್ ಜೊತೆ ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರದ ಟಿ.ನಗರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ . ಸೂಪರ್ ಸ್ಟಾರ್ ರಜನಿ ಕಾಂತ್ , ಇಳಯ ದಳಪತಿ ವಿಜಯ್​, ತಲಾ ಅಜಿತ್​, ಕಮಲ್​ ಹಾಸನ್​, ಶ್ರುತಿ ಹಾಸನ್, ನಟಿ ತ್ರಿಷಾ​ ಹಾಗೂ ಖುಷ್ಬೂ ಇತ್ಯಾದು ನಟರು ಕೂಡಾ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.

                                                                   ಮತಗಟ್ಟೆಯಲ್ಲಿ ಮತಚಲಾಯಿಸಿದ ಸೂಪರ್ ಸ್ಟಾರ್ ರಜನಿಕಾಂತ್

                                                    ಮತಗಟ್ಟೆಯ ಸರತಿ ಸಾಲಿನಲ್ಲಿ ಮತಚಲಾಯಿಸಲು ನಿಂತಿರುವ ಇಳಯ ದಳಪತಿ ವಿಜಯ್

     ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ನಟ ಸೂರ್ಯ, ಪತ್ನಿ ಜ್ಯೋತಿಕ, ಸೂರ್ಯ ಸಹೋದರ ಕಾರ್ತಿಕ್

                                                                  ಪುತ್ರಿ ಶೃತಿ ಹಾಸನ್ ರೊಂದಿಗೆ ಮತಚಲಾಯಿಸಿದ ನಟ ಕಮಲ್ ಹಾಸನ್

                                                                        ಮತಗಟ್ಟೆಗೆ ಮತ ಹಾಕಲು ಆಗಮಿಸುತ್ತಿರುವ ನಟ ಅಜಿತ್

                                                                          ಮತದಾನ ಮಾಡಿ ಫೋಟೋಗೆ ಫೋಸ್ ಕೊಟ್ಟ ನಟಿ ತ್ರಿಷಾ

                                                                                     ಮತದಾನ ಮಾಡಿದ ಬಹುಭಾಷಾ ನಟಿ ಖುಷ್ಬು

                                                             ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ತಮಿಳು ನಟ ಪ್ರಭು

                                                                          ಮತದಾನ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಬಹುಭಾಷಾ ನಟ ನಾಸಿರ್​