ಎಲ್ಲೀವರೆಗೆ ಮೋಸ ಹೋಗೋರು ಇರ್ತಾರೋ ಅಲ್ಲೀವರೆಗೆ ಮೋಸ ಮಾಡೋರೂ ಇರ್ತಾರೆ. ದಿನಕ್ಕೆ ಇಂಥ ಹತ್ತಾರು ಪ್ರಕರಣಗಳು ಬೆಳಕಿಗೆ ಬರ್ತವೆ. ಇಂಥದ್ದೇ ಒಂದು ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಆದ್ರಿಲ್ಲಿ ವಂಚಕನನ್ನ ಸರಿಯಾಗಿ ನಾಲ್ಕೇಟು ಬಿದ್ದಿವೆ. ಪೂಜೆ ಹೆಸ್ರಲ್ಲಿ ಜನ್ರನ್ನ ವಂಚಿಸ್ತಿದ್ದ ಚಂದ್ರಕಾಂತ್ ರಾವ್ ಎಂಬಾತನನ್ನ ಸಾರ್ವಜನಿಕ್ರು ನಾಲ್ಕು ತದ್ಕಿದ್ದಾರೆ. ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದ ಚಂದ್ರಕಾಂತ್​
ಕೊಪ್ಪಳ ನಿವಾಸಿಯೊಬ್ರಿಂದ ಪೂಜೆ ಹೆಸರಿನಲ್ಲಿ ದುಡ್ಡು ತಗೊಂಡು ಹೋಗಿದ್ದ. ಪೂಜೆನೂ ಮಾಡದೇ ಇತ್ತ ಪೂಜೆ ಸಾಮಾನು ತಂದು ಕೊಡದೆ ಯಾಮಾರಿಸಿದ್ದ. ಫೋನ್ ಮಾಡಿದ್ರೂ ಕರೆ ಸ್ವೀಕರಿಸಿರಲಿಲ್ಲ. ಇವತ್ತು ಬೆಳಿಗ್ಗೆ ಬಸ್ ನಿಲ್ದಾಣದ ಬಳಿ ಕಾಣ್ತಿದ್ದಂತೆ ಆತನ ಮೇಲೆ ಎರಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೊನೆಗೆ ಕೈ ಕಾಲು ಹಿಡಿದು ನಿಮ್ಮ ಹಣ ನಿಮ್ಗೆ ವಾಪಸ್ ಕೊಡ್ತೆನೆ ನನ್ನ ಬಿಟ್ಬಿಡಿ ಅಂತ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here