ಕರಡಿ ಸಂಗಣ್ಣನವರ ಮಗನಿಗೆ ಟಿಕೆಟ್ ಕೊಟ್ಟರೂ ಮುಗಿಯದ ಬಿಜೆಪಿ ಅಸಮಾಧಾನ!! ಈ ಬಾರಿ ಯಾರು ಬಂಡಾಯ ಎದ್ದಿರೋದು?

ಒಂದು ವಾರದ ಹಿಂದೇಯಷ್ಟೇ ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಅಧೀಕೃತವಾಗಿ ಘೋಷಣೆಯಾಗಿದ್ದ ಸಿ.ವಿ ಚಂದ್ರಶೇಖರ್ ಗೆ ಕೊನೆಗೂ ಟಿಕೇಟ್ ತಪ್ಪಿದಂತಾಗಿದೆ.ಸಂಸದ ಕರಡಿ ಸಂಗಣ್ಣ ತಮ್ಮ ಲಾಬಿಗೆ ಒಳಗಾಗಿ ತಮ್ಮ ಪುತ್ರ ಅಮರೇಶ್ ಕರಡಿಗೆ ಬೀ ಫಾರಂ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ad

ಹೌದು. ಬಿಜೆಪಿ ಹೈ ಕಮಾಂಡ್ ತಮ್ಮ 2ನೇ ಪಟ್ಟಿಯಲ್ಲಿ ಸಿ.ವಿ ಚಂದ್ರಶೇಖರ್ ಎಂದು ಘೋಷಣೆ ಮಾಡಿದ ಬೆನ್ನಲ್ಲೆ ಸಂಸದ ಕರಡಿ ಸಂಗಣ್ಣ ಅಸಮಾಧಾನ ವ್ಯಕ್ತಪಡಿಸಿದ್ರು.ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಬೇಕಾದ್ರೆ ನಾನೇ ಪ್ರಬಲ ಪ್ರತಿಸ್ಪರ್ಧಿ ಎಂದು ಹೇಳಿಕೊಂಡು ನನಗೆ ಟಿಕೇಟ್ ಕೊಡಿ ಇಲ್ಲ ಅಂದ್ರೆ ನನ್ನ ಮಗನಿಗೆ ಟಿಕೇಟ್ ಕೊಡಿ ಎಂದು ಕಳೆದ ನಾಲ್ಕೈದು ದಿನದಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟು, ಟಿಕೇಟ್ ಕೊಡದೇ ಇದ್ರೆ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆಂದು ಬೆದರಿಕೆ ಹಾಕಿ ತಮ್ಮ ಮಗ ಅಮರೇಶ್ ಕರಡಿಗೆ ಟಿಕೇಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಲಾಗುತ್ತಿದೆ.

ಇನ್ನೂ ನನಗೆ ಬಿ ಫಾರಂ ಸಿಗುತ್ತೆ ಎಂದು ಭರವಸೆಯಲ್ಲಿದ್ದ ಸಿವಿ ಚಂದ್ರಶೇಖರ್ ಕಳೆದ ದಿನ ನಾಮಪತ್ರ ಸಲ್ಲಿಸಿದ್ರು.ಆದ್ರೆ ಬಿಜೆಪಿ ಅಧಿಕೃತ ಅಭ್ಯರ್ಥಿ ಎಂದು ಅಮರೇಶ ಕರಡಿಗೆ ಬೀ ಫಾರಂ ಸಿಕ್ಕಿದ್ದರಿಂದ ಸಿವಿ ಚಂದ್ರಶೇಖರ್ ಅಸಮದಾನ ವ್ಯಕ್ತಪಡಿಸಿದ್ರು.ನನಗೆ ಮೋಸ ಮಾಡಬೇಡಿ ನನಗೆ ಬೀ ಫಾರಂ ಕೊಡಿ ಎಂದು ಬೇಡಿಕೊಳ್ಳುತ್ತ,ಇಂದು ಒಂದು ಗಂಟೆವರೆಗೆ ಬೀ ಫಾರಂ ನೀಡದೇ ಹೋದ್ರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಎಚ್ಚರಿಕೆ ನೀಡಿದ್ರು.

ಇನ್ನೂ ಮತ್ತೊಂದೆಡೆ ಬಿ ಫಾರಂ ನೊಂದಿಗೆ ಕೊಪ್ಪಳಕ್ಕೆ ಆಗಮಿಸಿದ ಕರಡಿ ಸಂಗಣ್ಣ ಹಾಗೂ ಪುತ್ರ ಅಮರೇಶ್ ಕರಡಿಗೆ ಕಾರ್ಯಕರ್ತರು ಬರಮಾಡಿಕೊಂಡರು. ಪಕ್ಷದ ತೀರ್ಮಾನದಂತೆ ನನಗೆ ಅಭ್ಯರ್ಥಿಯನ್ನಾಗಿಸಿದ್ದಾರೆ. ನಾನೇ ಗೆಲ್ಲುತ್ತೇನೆ,ಸಿವಿ ಚಂದ್ರಶೇಖರ್ ನನ್ನ ಹಿರಿ ಅಣ್ಣ ಇದ್ದಾಗೆ,ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ ಎಂದು ಅಮರೇಶ ಕರಡಿ ಹೇಳಿದ್ರು. ಇನ್ನೂ ಅಭ್ಯರ್ಥಿ ಘೋಷಣೆ ಯಾಗುವ ಮುನ್ನವೇ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಲಿ ಎಲ್ಲಾರು ಒಂದಾಗಿ ಚುನಾವಣೆ ಎದುರಿಸೋಣ ಸಿವಿ ಚಂದ್ರಶೇಖರ್ ಗೂಟಿಕೇಟ್ ಕೊಟ್ರು ನಾನೇ ಅಭ್ಯರ್ಥಿ ಎಂದು ಚುನಾವಣೆ ಎದುರಿಸುತ್ತೇನೆ,ಸಿವಿ ಚಂದ್ರಶೇಖರ್ ನನ್ನ ಹಿರಿಮಗ ಇದಂಗೆ ಎಂದು ಹೇಳಿಕೊಂಡಿದ್ದ ಸಂಸದ ಕರಡಿ ಸಂಗಣ್ಣ,ಬಿಜೆಪಿ ಪಟ್ಟಿಯಲ್ಲಿ ಸಿವಿ ಚಂದ್ರಶೇಖರ್ ಹೆಸರು ಘೋಷಣೆಯಾಗುತ್ತಿದಂತೆ ಅಸಮಾದಾನಗೊಂಡು,ಹೈ ಕಮಾಂಡ್ ಗೆ ಒತ್ತಡಹಾಕಿ ತಮ್ಮ ಮಗನಿಗೆ ಟಿಕೇಟ್ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ,ಇದರಲ್ಲಿ ನನ್ನದೇನು ಪಾತ್ರ ಇಲ್ಲ,ಎಲ್ಲಾ ವರಷ್ಠರ ನಿರ್ಣಯದಂತೆ ಆಗಿದೆ,ನಾವು ಯಾರಿಗೂ ಮೋಸ ಮಾಡಿಲ್ಲ ಎಂದು ಸಂಸದ ಕರಡಿ ಸಂಗಣ್ಣ ಹೇಳಿದ್ರು.