ರಣರಂಗವಾದ ಕೆಪಿಸಿಸಿ ಕಚೇರಿ !! ಕ್ವೀನ್ಸ್ ರಸ್ತೆಯಲ್ಲಿ ಆತ್ಮಹತ್ಯೆಗೆ ಮುಂದಾದ ಕೈ ಕಾರ್ಯಕರ್ತರು !!

 

ad

ರಾಜ್ಯ ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಶಾಸಕರ ಬೆಂಬಲಿಗರು ಇಂದು ನಗರದ ಕೆಪಿಸಿಸಿ ಕಚೇರಿ ಎದುರು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು.ರಾಜ್ಯ ಸಚಿವ ಸಂಪುಟದಲ್ಲಿ ಕುರುಬರಿಗೆ ಅವಕಾಶ ಸಿಕ್ಕಿಲ್ಲ ಎಂದು ಆರೋಪಿಸಿ ರಾಜ್ಯ ಕುರುಬರ ಸಂಘ ಕರೆ ನೀಡಿದ್ದ ಸಂಘದ ಸದಸ್ಯರು ಕೆಪಿಸಿಸಿ ಕಚೇರಿ ಮುಂದೆ ಧರಣಿ ನಡೆಸಿದರು.

ಮತ್ತೊಂದೆಡೆ ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಬೆಂಬಲಿಗರು ತಮ್ಮ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.ಇದೇ ವೇಳೆ ಮೂವರು ವ್ಯಕ್ತಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ಕಚೇರಿಯ ಎದುರು ಫ್ಲೆಕ್ಸ್ ಹಾಕಲು ನೆಡಲಾಗಿದ್ದ ಕಂಬಕ್ಕೆ ಇಬ್ಬರು ಕಾರ್ಯಕರ್ತರು ನೇಣು ಹಾಕಿಕೊಳ್ಳಲು ಸಿದ್ದತೆ ನಡೆಸಿದರು. ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮವಾಗಿ ಭದ್ರತೆ ಕೈಗೊಂಡಿದ್ದರೂ ಮೂವರು ಕಾರ್ಯಕರ್ತರು ಆತ್ಮಹತ್ಯೆಗೆ ಯತ್ನಿಸಿದರಾದರೂ ಪೊಲೀಸರು ಅದನ್ನು ವಿಫಲಗೊಳಿಸಿದರು. ಈ ವೇಳೆ ಪೊಲೀಸರು ಮತ್ತು ಬೆಂಬಲಿಗರ ಮಧ್ಯೆ ಸಂಘರ್ಷ ನಡೆಯಿತು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿಚಾರ್ಜ್ ಮಾಡಿದರು. ಇದೇ ವೇಳೆ ಕೆಲವು ಬೆಂಬಲಿಗರು ತಲೆ ಬೋಳಿಸಿಕೊಳ್ಳುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.