ಅಮಿತ್ ಶಾ ಒಬ್ಬ ಹೇಡಿ- ದಿನೇಶ್​ ಗುಂಡೂರಾವ್​ ಕಿಡಿ!!

ರಾಜ್ಯದಲ್ಲಿ ಚುನಾವಣೆ ಕಣ ರಂಗೇರುತ್ತಿದ್ದಂತೆ ಮೋದಿ ಹಾಗೂ ಅಮಿತ್ ಶಾ ಭೇಟಿ ಹೆಚ್ಚುತ್ತಲೇ ಇದೆ. ಇದು ರಾಜ್ಯ ಕಾಂಗ್ರೆಸ್ಸಿಗರ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಕಾಂಗ್ರೆಸ್ ನಾಯಕರು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಹೌದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ವಾಗ್ದಾಳಿ ನಡೆಸಿದ್ದು, ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಅಮಿತ್ ಶಾ ಒಬ್ಬ ಹೇಡಿ ಅಂತಾ ಗುಡುಗಿದ್ದಾರೆ. ನನ್ನ ಕರ್ನಾಟಕ ಎಂಬ ಯುವಜನ ಅಭಿಯಾನಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಚಾಲನೆ ನೀಡಿದ ಗುಂಡೂರಾವ್​ ಮಾತನಾಡುತ್ತಿದ್ದರು. ದಿನೇಶ್​, ಮೋದಿ ಹಾಗೂ ಅಮಿತ್ ಶಾ ದ್ವೇಷದ ರಾಜಕಾರಣದಿಂದ ಕಾಂಗ್ರೆಸ್ ಮುಖಂಡರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದಾರೆ ಎಂದು ಗುಂಡೂರಾವ್​ ಆರೋಪಿಸಿದರು. ಈ ಹಿಂದೆ ಇದ್ದ ದೇಶದ ರಾಜಕಾರಣಿಗಳು ಯಾವತ್ತೂ ಈ ರೀತಿ ನಡೆದುಕೊಂಡಿಲ್ಲ . ವಿರೋಧ ಪಕ್ಷಗಳನ್ನ ಮಣಿಸಲು ಈ ರೀತಿ ಕೀಳುಮಟ್ಟಕ್ಕೆ ಇಳಿದಿರೋದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದರು.