ಅಮಿತ್ ಶಾ ಟೀಕೆಗೆ ಉಗ್ರ ಹೋರಾಟದ ಉತ್ತರ ನೀಡಿದ್ರಾ ಪ್ರತಾಪ್ ಸಿಂಹ ?

KPCC president Dinesh Gundurao Reacts about MP Pratap Simha.
KPCC president Dinesh Gundurao Reacts about MP Pratap Simha.

ಮೈಸೂರಿನಲ್ಲಿ ಪ್ರೊಟೆಸ್ಟ್​ ವೇಳೆ ಸಂಸದ ಪ್ರತಾಪ ಸಿಂಹ ವರ್ತನೆಗೆ ಅವರನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವುದು ಕಾರಣನಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಕಳೆದ ಭಾರಿ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾ ಬಿಜೆಪಿ ಯುವಮೋರ್ಚಾ ಸಾಧನೆಗಳನ್ನು ಪ್ರಶ್ನಿಸಿದ್ದರು. ಈ ವೇಳೆ ರಾಜ್ಯದಲ್ಲಿ ಯುವಮೋರ್ಚಾ ಕಾರ್ಯನಿರ್ವಹಿಸುತ್ತಿರುವುದು ತೃಪ್ತಿಕರವಾಗಿಲ್ಲ. ಉಗ್ರ ಪ್ರತಿಭಟನೆಗಳನ್ನು ಆಯೋಜಿಸಬೇಕೆಂದು ಅಸಮಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ನಿನ್ನೆ ಪ್ರತಿಭಟನೆ ವೇಳೆ ಪ್ರತಾಪ ಸಿಂಹ ತಮ್ಮ ಉಗ್ರಾವತಾರ ಪ್ರದರ್ಶಿಸಿ ಟೀಕೆಗೆ ಗುರಿಯಾಗಿದ್ದಾರೆ ಎನ್ನಲಾಗ್ತಿದೆ.


ಇನ್ನು ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ ಕೂಡ ಟೀಕಿಸಿದ್ದು, ಬಿಜೆಪಿ ಸಂಸದ ಪ್ರತಾಪ್ ಸಿಂಗ್ ಒತ್ತಡದಿಂದ ಬಳಲುತ್ತಿರುವಂತಿದೆ. ಅವರನ್ನು ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಸೇರಿಸಿಕೊಂಡಿಲ್ಲ. ಯಾತ್ರೆಗೂ ಕರೆಯಲಾಗಿಲ್ಲ. ಅಲ್ಲದೇ ಅಮಿತ್ ಶಾ ರಾಜ್ಯಕ್ಕೆ ಬಂದಾಗ ಪ್ರತಾಪ ಸಿಂಹರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಒಂದು ರೀತಿಯ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ರೀತಿ ವರ್ತಿಸುತ್ತಿರುವ ಸಾಧ್ಯತೆ ಇದೆ ಎಂದಿದ್ದಾರೆ.

 

 

 

ಈ ಮಧ್ಯೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಕ್ಕೆ ಪುಷ್ಠಿ ನೀಡುವಂತ ಹೇಳಿಕೆಯುಳ್ಳ ವಿಡಿಯೋವೊಂದನ್ನು ಸಂಸದ ಪ್ರತಾಪ ಸಿಂಹ ತಮ್ಮ ಪೇಸ್ ಬುಕ್​​ನಲ್ಲಿ ಹಾಕಿಕೊಂಡಿದ್ದು, ಅದರಲ್ಲಿ ತಮಗೆ ಅಮಿತ್ ಶಾ ಖಡಕ್ ಸೂಚನೆ ನೀಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ.

 


ಹೀಗಾಗಿ ಬಿಜೆಪಿ ಹೈಕಮಾಂಡ್​ ಒತ್ತಡದಿಂದ ಪ್ರತಾಪ ಸಿಂಹ ಉಗ್ರ ಹೋರಾಟಕ್ಕೆ ಮುಂಧಾಗಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಘಟನೆ ನಡೆದಿದೆ ಎಂದೇ ವಿಶ್ಲೇಷಿಸಲಾಗಿದ್ದು, ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಹಾಗೂ ಕಾನೂನು ಸುವ್ಯವಸ್ಥೆ ನಡುವೆ ಮಹಾಯುದ್ಧವೇ ನಡೆದಿದೆ.

1 ಕಾಮೆಂಟ್

  1. […] ಇನ್ನೂ ಅಪ್ರಬುದ್ಧವಾಗಿದ್ದು, ರಾಜಕೀಯವಾಗಿ ಪ್ರತಾಪ್​​ ಸಿಂಹಗೆ ಮೆಚ್ಯುರಿಟಿ ಬೇಕು ಅಂತ ಹೇಳಿದ್ದಾರೆ. […]

Comments are closed.