ಬಡ್ತಿ ಮೀಸಲು ಸಂಬಂಧ ಸುಪ್ರಿಂಕೋರ್ಟ್​ ನೀಡಿರುವ ಆದೇಶವನ್ನು ಪಾಲನೆ ಮಾಡುವಂತೆ ಆಗ್ರಹಿಸಿ ಇವತ್ತು ಕೆಪಿಟಿಸಿಎಲ್​ನ ಜನರಲ್​ ಕೆಟಗರಿ ನೌಕರರು ಬೃಹತ್​ ಪ್ರತಿಭಟನೆ ನಡೆಸ್ತಿದ್ದಾರೆ. ಸಾಮಾಜಿಕ ನ್ಯಾಯ ಹಾಗೂ ಸರ್ವರಿಗೂ ಸಮಪಾಲು ಸಮಬಾಳು ಅಡಿ ನ್ಯಾಯ ಕೊಡಿ ಅಂತಾ ಆಗ್ರಹಿಸಿ ಫ್ರೀಡಂಪಾರ್ಕ್​ನಲ್ಲಿ ಇವತ್ತು ಬೆಳಿಗ್ಗಿನಿಂದ ನೌಕರರು ಸಮಾವೇಶ ನಡೆಸಿದ್ರು. ಆನಂತ್ರ ಕಾವೇರಿ ಭವನದವರೆಗೂ ಬೃಹತ್​​​ ಱಲಿ ಮೂಲಕ ತೆರಳಿದ್ರು. ಇನ್ನು ಪ್ರತಿಭಟನಾ ನಿರತರನ್ನು ಇಂಧನ ಸಚಿವ ಡಿಕೆ ಶಿವಕುಮಾರ್​ ಭೇಟಿ ಮಾಡಿ ಮನವಿ ಸ್ವೀಕರಿಸಿದ್ರು. ಅಲ್ಲದೇ ನಿಮ್ಮ ಬೇಡಿಕೆಗಳ ಸಂಬಂಧ ಸಿಎಂ ಜತೆ ಚರ್ಚೆ ಮಾಡುತ್ತೇನೆ. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಅಂತಾ ಭರವಸೆ ನೀಡಿದ್ರು.
====================
END
=====
ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮತ್ತು ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಎಂಬ ಧ್ಯೇಯ ವಾಕ್ಯದಡಿ ಸುಪ್ರೀಂ ಕೋರ್ಟ್‌ ಈಗಾಗಲೇ ನೀಡಿರುವ ಆದೇಶವನ್ನು ಕೆಪಿಟಿಸಿಎಲ್‌ ಪಾಲಿಸದ ಕಾರಣ ಹಲವು ನೌಕರರಿಗೆ ಅನ್ಯಾಯವಾಗಿದೆ. 1978ರಲ್ಲಿ ರಾಜ್ಯ ಸರ್ಕಾರದ ಮೀಸಲಾತಿ ನೀತಿಗೆ ವಿರುದ್ಧ ನೀಡಲಾದ ಸಾಂದರ್ಭಿಕ ಜೇಷ್ಠತೆಯನ್ನು ಎಂ.ಜಿ.ಬಡಪ್ಪನವರ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಕಾನೂನಿಗೆ ವಿರುದ್ಧವಾಗಿ ನೀಡಿದ್ದ ಸಾಂದರ್ಭಿಕ ಜೇಷ್ಠತೆಯನ್ನು ಆಗ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಬಡಪ್ಪನವರ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಆದೇಶ ಲೋಕೋಪಯೋಗಿ ಇಲಾಖೆಯಲ್ಲಿ ಪಾಲನೆಯಾಗಿದೆ. ಆದರೆ, ಕೆಪಿಟಿಸಿಎಲ್‌ ಇದುರೆಗೂ ಆದೇಶ ಪಾಲನೆಗೆ ಮುಂದಾಗದ ಕಾರಣ ಜಾಥಾ ಹಮ್ಮಿಕೊಂಡಿದ್ದು, ರಾಜ್ಯದ ವಿವಿಧ ಭಾಗಗಳ ನೌಕರರು ಮತ್ತು ಅಧಿಕಾರಿಗಳು ಜಾಥದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here