ಬಾಲಿವುಡ್​ ಅಂಗಳದಲ್ಲಿ ಕೃತಿ ಕರಬಂದ್​​- ಹೌಸ್​ ಫುಲ್​​ 4 ರಲ್ಲಿ ಅಕ್ಕಿಗೆ ಜೊತೆಯಾದ ಬೆಡಗಿ!

ಗೂಗ್ಲಿ ಬೆಡಗಿ ಕೃತಿ ಕರಬಂಧ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ .? ತನ್ನ ಮುದ್ದಾದ ಚೆಲುವಿನಿಂದಲೇ ಎಲ್ಲರ ಗಮನ ಸೆಳೆದಿರೋ ಚೆಲುವೆ ಈಕೆ..ಸಧ್ಯ ಬಾಲಿವುಡ್ ಅಂಗಳದಲ್ಲಿ ಫುಲ್ ಬ್ಯುಸಿ ಆಗಿರೋ ಕೃತಿ ಬಿಟೌನ್ ನ ಕಿಲಾಡಿ ಅಕ್ಕಿ ಜೊತೆ ತೆರೆ ಹಂಚಿಕೊಳ್ಳೋಕೆ ರೆಡಿಯಾಗಿದ್ದಾರೆ.ಅಷ್ಟಕ್ಕೂ ಕೃತಿ ಅಕ್ಷಯ್ ಜೊತೆಗೆ ಯಾವ ಸಿನಿಮಾ ಮಾಡ್ತಿದ್ದಾರೆ ಅಂತಾ ಕುತೂಹಲನಾ..? ಈ ಸ್ಟೋರಿ ನೋಡಿ ನಿಮ್ಗೆ ಗೊತ್ತಾಗತ್ತೆ.

ad


ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಲೀಡ್​​ನಲ್ಲಿರೋ ಹಿರೋಯಿನ್ ಗಳ ಪೈಕಿ ಕೃತಿ ಕರಬಂಧ ಕೂಡ ಒನ್ನಾಫ್​ ದಿ ಹಿರೋಯಿನ್ ಅಂದ್ರೆ ತಪ್ಪಾಗಲ್ಲ​..ಜೊತೆಗೆ ಮೋಸ್ಟ್​​ ಟ್ಯಾಲೆಂಟೆಡ್​​​ ನಟಿ ಈ ಪ್ರೇಮ್ ಅಡ್ಡ ಹುಡುಗಿ..ಅದರಲ್ಲೂ ಎಂಥದ್ದೇ ಪಾತ್ರ ನೀಡಿದ್ರೂ ಅದರನ್ನ ನಿಭಾಯಿಸಬಲ್ಲೆ ಅನ್ನೋದನ್ನು ಈಗಾಗ್ಲೇ ತೋರಿಸಿಕೊಟ್ಟಿದ್ದಾರೆ ಇದೇ ಕೃತಿ..

ಕೃತಿ ಕರಬಂಧ ಸ್ಯಾಂಡಲ್​​ವುಡ್​ ಡಾಲ್​​ ಹೋಮ್ಲಿ ಲುಕ್​ಗೂ ಸೈ ಹಾಟ್​ ಅವತಾರಕ್ಕೂ​ ಜೈ ಅನ್ನೋ ಹುಡುಗಿ. ಗೂಗ್ಲಿ,ತಿರುಪತಿ ಎಕ್ಸ್ ಪ್ರೆಸ್ ,ಬೆಳ್ಳಿ ಚಿತ್ರಗಳಲ್ಲಿ ಬೋಲ್ಡ್ ಆ್ಯಂಡ್ ಮುದ್ದು ಮುದ್ದಾಗಿ ನಟಿಸಿದ್ರು.ಇನ್ನೂ ಪ್ರೇಮ್ ಅಡ್ಡ ಸಿನಿಮಾದಲ್ಲಿ ತಾನು ಕೂಡ ಪಕ್ಕಾ ಹಳ್ಳಿ ಹುಡ್ಗಿಯಾಗಿ ಅಭಿನಯಿಸಿ ತಾನೊಬ್ಬ ಒಳ್ಳೆ ನಟಿ ಅನ್ನೋದನ್ನ ಪ್ರ್ಯೂ ಮಾಡಿದ್ದಾರೆ.

ಮಾಸ್ತಿ ಗುಡಿ ಚಿತ್ರದ ನಂತ್ರ ಕನ್ನಡದ ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳದ ಪ್ರೇಮ್ ಅಡ್ಡ ಬ್ಯೂಟಿ ಕೃತಿ ಕರಬಂಧ ಬಾಲಿವುಡ್ ಅಂಗಳದತ್ತ ಸಾಗಿದ್ರು..ನಂತ್ರ ರಾಜ್ ಚಿತ್ರದ ಮೂಲಕ ಬಿಟೌನ್ ಸಿನಿ ಜರ್ನಿ ಆರಂಭಿಸಿದ್ದ ಕೃತಿ ಕರ್ವಾನ್‌‌‌‌, ಯಮ್ಲಾ ಪಗ್ಲಾ ದಿವಾನ, ‘ಶಾದಿ ಮೇ ಜರೂರ್ ಅನಾ’ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸು ಗೆಲ್ಲಲು ಸಕ್ಸಸ್ ಕಂಡಿದ್ದಾರೆ.ಬಿಟೌನ್ ನಲ್ಲಿ ಸಖತ್ ಬ್ಯುಸಿ ಆಗಿರೋ ನಟಿ ಕೃತಿ ಕರಬಂಧಗೆ ಈಗ ಬಿಗ್ ಆಫರ್ ಸಿಕ್ಕಿದೆ.ಬಾಲಿವುಡ್ ಅಂಗಳದಲ್ಲಿ ಬಾರಿ ಸದ್ದು ಮಾಡಿರುವ ‘ಹೌಸ್ ಫುಲ್4’ ಸಿನಿಮಾದಲ್ಲಿ ನಾಯಕಿಯಾಗಿ ಆ್ಯಕ್ಟ್ ಮಾಡೋಕೆ ಕೃತಿ ಕರಬಂಧ ಆಯ್ಕೆ ಆಗಿದ್ದಾರೆ..ಈಗಾಗಲೇ ಬಾರಿ ಕುತೂಹಲ ಹುಟ್ಟುಹಾಕಿರೋ ‘ಹೌಸ್ ಪುಲ್’ 4 ಚಿತ್ರದಲ್ಲಿ ಕಿಲಾಡಿ ಅಕ್ಷಯ್ ಕುಮಾರ್ ಜೊತೆ ಕೃತಿ ಕರಬಂಧ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ.ಹೌಸ್ ಫುಲ್ ಚಿತ್ರದಲ್ಲಿ ರಿತೇಶ್ ದೆಶ್ಮುಖ್, ಬಾಬಿ ಡಿಯೋಲ್ ಮತ್ತು ಅಭಿಷೇಕ್ ಬಚ್ಚನ್ ಆಕ್ಟ್ ಮಾಡಲಿದ್ದಾರೆ. ಇದೇ ತಿಂಗಳಲ್ಲಿ ‘ಹೌಸ್ ಫುಲ್ 4’ ಚಿತ್ರದ ಶೂಟಿಂಗ್ ಶುರುವಾಗಲಿದ್ದು ಕೃತಿ ಯಾರ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಮಾತ್ರ ಸೀಕ್ರೆಟ್ ಆಗಿ ಇಟ್ಟಿದೆ ಚಿತ್ರತಂಡ.. ‘ಹೌಸ್ ಫುಲ್’ ಹಾಗೂ ‘ಹೌಸ್ ಫುಲ್ 2ಸಿನಿಮಾವನ್ನ ನಿರ್ದೇಶನ ಮಾಡಿದ್ದ ಸಾಜಿದ್ ಖಾನ್ ಅವ್ರೇ ಹೌಸ್ ಫುಲ್ 4 ಚಿತ್ರವನ್ನು ಡೈರೆಕ್ಟ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಕೃತಿಕರಬಂಧ ಬಿಟೌನ್ ಅಂಗಳದಲ್ಲಿ ತನ್ನದೆ ಆದ ವಿಭಿನ್ನ ನಟನೆ ಮೂಲಕ ಎಲ್ಲರ ಗಮನ ಸೆಳಿತಿದ್ದು,ಅಕ್ಷಯ್ ಕುಮಾರ್ ಜೊತೆಗೆ ಹೌಸ್ ಫುಲ್ 4 ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ತಾರೆ ಅನ್ನೋದು ಕಾದು ನೋಡ್ಬೇಕು..