ಲೋಕಾಯುಕ್ತರ ಮೇಲಿನ ಹಲ್ಲೆ ಪ್ರಕರಣ- ಬಿಜೆಪಿ ನಾಯಕರಿಂದ ಸರ್ಕಾರದ ಮೇಲೆ ವಾಗ್ದಾಳಿ!

Jagadish Shettar and Ashwath Narayan Reacts against State Government.

ತೇಜ್​ರಾಜ್​ಶರ್ಮಾನಿಂದ ಚೂರಿ ಇರಿತಕ್ಕೊಳಗಾದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ನಗರದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ad


ಆರೋಗ್ಯ ಸಧ್ಯ ಸ್ಥಿರವಾಗಿದ್ದು, ತಜ್ಞ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ಮಲ್ಯ ಆಸ್ಪತ್ರೆಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದು, ವಿಶ್ವನಾಥ ಶೆಟ್ಟಿಯವರ ಆರೋಗ್ಯ ವಿಚಾರಿಸಿದ್ದಾರೆ.
ಮಲ್ಯ ಆಸ್ಪತ್ರೆಗೆ ಕೇಂದ್ರ ಸಚಿವ ಪಿಯೂಶ್​ ಗೋಯಲ್​, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್,ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಸೇರಿದಂತೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿ ವಿಶ್ವನಾಥ ಶೆಟ್ಟಿಯವರ್ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ, ಕೇಂದ್ರ ಸಚಿವ ಪಿಯೂಶ್​ ಗೋಯಲ್​, ಲೋಕಾಯುಕ್ತರ ಮೇಲೆ ಹಲ್ಲೆ ಆದ ವಿಚಾರ ಕೇಳಿ ಶಾಕ್ ಆಯ್ತು.

ಕರ್ನಾಟಕದಲ್ಲಿ ಕಾನೂನು ‌ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ. ಅಮಿತ್ ಷಾ ಕೂಡ ವಿಷಯ ಕೇಳಿ ಶಾಕ್ ಆದ್ರು. ಸುಮಾರು ೨೦ ನಿಮಿಷಗಳ‌ ಕಾಲ ಆತ ಹಲ್ಲೆ ನಡೆಸಿದ್ದಾನೆ. ಯಾವುದೇ ರೀತಿಯ ಸೆಕ್ಯುರಿಟಿ ಭದ್ರತೆಯನ್ನು ಒದಗಿಸಲು ಸರ್ಕಾರ ವಿಫಲವಾಗಿದೆ. ನ್ಯಾಯಾದೀಶರು ಹಾಗೂ ಕಾನೂನು ಪಾಲಕರಿಗೆ ಕೂಡಲೇ ಸರ್ಕಾರ ಭದ್ರತೆಯನ್ಮು ಒದಗಿಸಬೇಕು ಎಂದರು.  ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಈಗಾಗಲೇ ಹದಗೆಟ್ಟಿದೆ. ಬಸ್​ ನಲ್ಲಿ ಕೊಲೆಯಾಗಿದೆ. ಶಾಸಕನ ಕಡೆಯವರು ಅಂತ ಹಲ್ಲೆ ಮಾಡ್ತಾರೆ. ಸರ್ಕಾರ ಕಚೇರಿಯಲ್ಲಿ ಪೆಂಟ್ರೋಲ್ ಸುರಿದ ಬೆಂಕಿ ಹಚ್ಚಲು ಮುಂದಾದ್ರು ರೈಲುಗಳಲ್ಲಿ ಹಲ್ಲೆ ಮಾಡಿದ್ರು ಈಗ ಲೋಕಾಯುಕ್ತರನ್ನೇ ಕೊಲೆ‌ ಮಾಡೋಕೆ ಹೋಗ್ತಾರೆ ಎಂದು ಪ್ರಕಾಶ್ ಜಾವಡೇಕರ್ ಟೀಕಿಸಿದ್ದಾರೆ.