ಮಂಡ್ಯ ಚುನಾವಣಾ ಅಖಾಡದಲ್ಲಿ ‘ಕುಮಾರ’ ಪರ್ವ…

ಮಂಡ್ಯದ ಜೆಡಿಎಸ್ ಸಮಾವೇಶದಲ್ಲಿ ಸಿಎಂ‌ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ!

ಮಂಡ್ಯ ಜಿಲ್ಲೆ ನನಗೆ ಧಾರೆ ಎರೆದಿದ್ದೀರಾ.! ಕಡಿಮೆ ಅವಧಿಯ ಈ ಕಾರ್ಯಕ್ರಮಕ್ಕೆ ನೀಡಿದ ಸ್ಪಂದನೆಗೆ ಧನ್ಯವಾದ‌ ಹೇಳುವೆ, ಇಲ್ಲಿನ ಮೂರು ಜನ ಸಚಿವರು, ಎಲ್ಲಾ ಶಾಸಕರ ‌ಒಮ್ಮತದ ತೀರ್ಮಾನದಂತೆ‌ ನಿಖಿಲ್ ಅಭ್ಯರ್ಥಿ ಆಗಿದ್ದಾರೆ. ನಾನು ಎಷ್ಟು ಯಾತನೆ, ನೋವನ್ನು ಅನುಭವಿಸಿರುವೆ ಇಂತಹ ಪರಿಸ್ಥಿತಿಯನ್ನು ನಾನು‌ ಊಹಿಸಿರಲಿಲ್ಲ.

ಮಂಡ್ಯ ಜನರನ್ನು ಮರೆಯುವ‌ ಪ್ರಶ್ನೆಯೇ‌ ಇಲ್ಲ..! ನಾನು ಮೂಲ ಹಾಸನ, ಆದರೆ ರಾಮನಗರ‌ದ ಜನ ನನಗೆ ಪುನರ್ಜನ್ಮ ನೀಡಿದ್ದಾರೆ. ನನ್ನಲ್ಲಿ ಅಂತಾ ವಿಶೇಷತೆ ಏನಿತ್ತು..?  ಮಂಡ್ಯದ ಜನ‌ ಸುಖವಾಗಿರಬೇಕೆಂದು‌ ಬಯಸುವ ನಾನು ರಾಜಕೀಯಕ್ಕೆ ಬರುವ ಮುಂಚೆಯೇ‌ ಸ್ವರ್ಣಸಂದ್ರ‌ ಹೆಣ್ಮಗಳಿಗೆ ಸಹಾಯ ಮಾಡಿದ ದಿನದಿಂದಲೇ ಮಂಡ್ಯ‌ ಜೊತೆ ಅವಿನಾಭಾವ ಸಂಬಂಧವಿದೆ.. ಕಳೆದ ಅಕ್ಟೋಬರ್ ನಿಂದ ನಿರಂತರ ಓಡಾಟ ಮಾಡುತ್ತಿದೆನೆ ಹಾಗಾಗಿ ಆರೊಗ್ಯ ಸಮಸ್ಯೆ ಇದೆ..! ನನ್ನ ಸಮಸ್ಯೆ ಅರಿತಿರುವ ನಿಖಿಲ್ ಕುಮಾರಸ್ವಾಮಿ ನನ್ನ ಜೊತೆ ಇದ್ದು ಸಹಾಯ ಮಾಡೋದಕ್ಕೆ ಇಲ್ಲಿ ಗೆಲ್ಲಬೇಕು.  ಕುಟುಂಬ ರಾಜಕಾರಣ ಅಂದ್ರೆ ದೇವೇಗೌಡರ ರಕ್ತ ಹಂಚಿಕೊಂಡವರು ಅಂತಾ ಮಾತ್ರ ಭಾವಿಸಿದ್ದಾರೆ , ಆದರೆ ಇಡೀ ರೈತರ ಕುಟುಂಬವೇ ದೇವೇಗೌಡರ ಕುಟುಂಬ ಅನ್ನೋದೇ ಗೊತ್ತಿಲ್ಲ. ಮಂಡ್ಯದ ಜನರ ಋಣ ತೀರಿಸೋದಕ್ಕೆ ಆಗಲ್ಲ ಅಂತಾ ನಿಖಿಲ್ ಗೆ ಹೇಳಿದ್ದೀನಿ,

ಅಂಬರೀಷ್ ಬಗ್ಗೆ ನಾನು ಹಿಂದಿನ ಕಾರ್ಯಕ್ರಮದಲ್ಲಿ ಕೆಟ್ಟದಾಗಿ ಮಾತನಾಡಿದ್ದೀನಾ, ನಾನು ಮಾತನಾಡಿದ್ದರಲ್ಲಿ ತಪ್ಪಿದೆಯೇ
ಅಂಬಿ ಮಗ ಬೇರೆಯಲ್ಲ, ನನ್ನ‌ ಮಗ ಬೇರೆಯಲ್ಲ ..ಅಂಬಿ ತೀರಿಕೊಂಡಾಗ ಮಧ್ಯರಾತ್ರಿ ಅವರ ಪುತ್ರ ಫೋನ್ ಮಾಡಿ ವಿಷಯ ತಿಳಿಸಿದ!ನಾನು ಅಹೋರಾತ್ರಿ ಅಲ್ಲಿದ್ದೂ ಅಂಬಿ‌ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿದ್ದೇನೆ . ಅದು ಅಂಬಿ ಅವರ ಆತ್ಮಕ್ಕೆ ಮಾತ್ರ ಗೊತ್ತು, ನಾನು ಪ್ರೀತಿಯಿಂದ ಅಣ್ಣಾ ಅಂತಾ ನಂಬಿದ್ದವನು.

ಮಂಡ್ಯದ ಮೈಷುಗರ್ ಕಾರ್ಖಾನೆ ಸಮಸ್ಯೆ: *ಕಬ್ಬು ಸರಬರಾಜು ಮಾಡಿದ ರೈತರಿಗೆ ಸರ್ಕಾರದಿಂದಲೇ 17 ಕೋಟಿ ಬಿಡುಗಡೆಗೆ ಈಗಾಗಲೇ ಆದೇಶ ಮಾಡಿದ್ದೇನೆ. ಇನ್ನೂ ಮೂರ್ನಾಲ್ಕು‌ ದಿನಗಳಲ್ಲಿ‌ ಕಬ್ಬು ಬೆಳೆದವರಿಗೆ ಹಣ ತಲುಪುತ್ತೆ. *ಭತ್ತ‌ ಖರೀದಿ ಕೇಂದ್ರಕ್ಕೆ 150 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. *ಮಳವಳ್ಳಿ ತಾಲೂಕು ಒಂದಕ್ಕೆ 1300 ಕೋಟಿ ರೂಪಾಯಿ ಬಿಡುಗಡೆ. *ಮಂಡ್ಯ ಜಿಲ್ಲೆ ಒಂದಕ್ಕೆ 386 ಕೋಟಿ 90 ಸಾವಿರ ಫಲಾನುಭವಿಗಳಿಗೆ‌ ಹಂಚಿಕೆ ಮಾಡಿದ್ದೇವೆ. ಹಾಗಾದರೆ ನಾನು ಸುಳ್ಳು ಹೇಳ್ತಿದ್ದೇನಾ..? ಮಂಡ್ಯದ ಸಮಗ್ರ ಅಭಿವೃದ್ದಿ ಗೆ ನಾನು ಬೇಕೋ..? ಬೇರೆ ಕಾರಣಗಳಿಗೆ ಬೇರೆಯವರು ಬೇಕೋ‌…? ನೀವೇ‌ ತೀರ್ಮಾನಿಸಿ…! ಎಂದು ಮಂಡ್ಯದ ಜನರಲ್ಲಿ ಸಿಎಂ ಕುಮಾರಸ್ವಾಮಿ ಅವರು ಮನವಿ  ಮಾಡಿಕೊಂಡರು.