ವಾಸ್ತುದೋಷ ಎಫೆಕ್ಟ್ ಸಿಎಂ ಅಧಿಕೃತ ನಿವಾಸ ಜೆಪಿನಗರಕ್ಕೆ ಶಿಫ್ಟ್- ಎಚ್.ಡಿ.ಕೆ.ಪರ್ವಾರಂಭ

ಕರ್ನಾಟಕದ ರಾಜಕಾರಣ ಜಾತಿ ಆಧಾರಿತವಾಗಿರುವಷ್ಟೇ ಸ್ಪಷ್ಟವಾಗಿ ದೇವರು-ಶುಭಕಾಲ-ವಾಸ್ತುಶಾಸ್ತ್ರದ ಮೇಲೆ ನಿಂತಿದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಹೌದು ನೂತನ ನಿಯೋಜಿತ ಸಿಎಂ ಕುಮಾರಸ್ವಾಮಿ ವಾಸ್ತು ದೋಷದ ಕಾರಣ ಕೊಟ್ಟು ಸಿಎಂ ಅಧಿಕೃತ ನಿವಾಸವನ್ನೇ ಬದಲಾಯಿಸಲು ಮುಂಧಾಗಿದ್ದು, ಇನ್ಮುಂದೆ ಕುಮಾರಸ್ವಾಮಿಗೆ ಅದೃಷ್ಟ ತಂದುಕೊಟ್ಟ ಅವರ ಜೆ.ಪಿ.ನಗರ ನಿವಾಸವೇ ಸಿಎಂ ಮನೆಯಾಗಲಿದೆ.

 

 

ಹೌದು ನಿಯೋಜಿತ ಸಿಎಂ ಕುಮಾರಸ್ವಾನಿ ಈಗಾಗಲೇ ಸಿಎಂ ಆಗಿ ಆಡಳಿತ ನಡೆಸಲು ಸಜ್ಜಾಗಿದ್ದಾರೆ. ಆಗಲೇ ಸಿಎಂ ನಿವಾಸವಾಗಿ ತಮ್ಮ ಜೆಪಿ ನಗರ ಮನೆಯನ್ನೇ ಬಳಸಲು ನಿರ್ಧರಿಸಿದ್ದು ಇದಕ್ಕೆ ಕಾರಣ ವಾಸ್ತು. ಜೆಪಿನಗರ ನಿವಾಸವನ್ನು ಕುಮಾರಸ್ವಾಮಿ ಕೋಟ್ಯಾಂತರ ರೂಪಾಯಿ ಬಳಸಿ ವಾಸ್ತುಪ್ರಕಾರ ಕಟ್ಟಿಸಿದ್ದರು. ಇದೇ ಮನೆಯಿಂದ ಅವರಿಗೆ ಅದೃಷ್ಟ ಒಲಿದು ಅವರು ಮುಖ್ಯಮಂತ್ರಿಯಾಗಿದ್ದಾರೆ ಎಂದು ಎಚ್​ಡಿಕೆ ಕುಟುಂಬ ನಂಬಿದೆ. ಹೀಗಾಗಿ ಯಾವುದೇ ಸಮಸ್ಯೆಗಳು ತಲೆದೋರಬಾರದು ಎಂಬ ಕಾರಣಕ್ಕೆ ಇದೇ ನಿವಾಸವನ್ನು ಮುಖ್ಯಮಂತ್ರಿಗಳ ನಿವಾಸವಾಗಿ ಬಳಸಲಿದ್ದಾರೆ.

ಮುಖ್ಯಮಂತ್ರಿಗಳಿಗಾಗಿಯೇ ಅನುಗ್ರಹ ಮತ್ತು ಕಾವೇರಿ ನಿವಾಸಗಳಿವೆ. ಇನ್ನು ಕೃಷ್ಣಾ ಮುಖ್ಯಮಂತ್ರಿಗಳ ಗೃಹ ಕಚೇರಿಯಾಗಿದೆ. ಆದರೇ ಈ ಹಿಂದೆಯೂ ಹಲವು ಸಿಎಂಗಳು ಅನುಗ್ರಹ ಸೇರಿದಂತೆ ಸಿಎಂಗೆ ಮೀಸಲಾಗಿರುವ ನಿವಾಸದಲ್ಲಿ ವಾಸ್ತುಕಾರಣಕ್ಕೆ ವಾಸ್ತವ್ಯ ಹೂಡಲು ನಿರಾಕರಿಸಿದ್ದರು. ಆದರೇ ಬದುಕಿನಲ್ಲಿ ತುಂಬ ಏಳು-ಬೀಳುಗಳನ್ನು ನೋಡಿದ್ದ ಡಿ.ವಿ.ಸದಾನಂದ ಗೌಡರು ಮಾತ್ರ ಆ ನಿವಾಸದಲ್ಲೇ ವಾಸವಾಗಿದ್ದರು.

ಇದೀಗ ಕುಮಾರಸ್ವಾಮಿ ಜೆ.ಪಿ,ನಗರ ನಿವಾಸದಲ್ಲಿ ವಾಸ ಮಾಡಲು ನಿರ್ಧರಿಸಿದ್ದು ಈಗಾಗಲೇ ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಹಾಗೂ ಡಿಜಿ-ಐಜಿ ನೀಲಮಣಿ ರಾಜು ಕೂಡ ಇದಕ್ಕೆ ಅಗತ್ಯ ಸಿದ್ಧತೆ ಆರಂಭಿಸಿದ್ದಾರೆ. ಇದರಿಂದ ಸದಾಕಾಲ ಚಟುವಟಿಕೆಯ ಗೂಡಾಗಿರುತ್ತಿದ್ದ ಸಿಎಂ ಅಧಿಕೃತ ನಿವಾಸ ಕಾವೇರಿ ಇನ್ನು ಮೌನವಾಗಲಿದೆ.