ಸಿಎಂ ಆದ್ರು ಕುಮಾರಸ್ವಾಮಿ- ಅಸಮಧಾನಗೊಂಡ್ರು ರಾಮನಗರದ ಮಂದಿ- ಅಷ್ಟಕ್ಕೂ ಅವರ ಕೋಪಕ್ಕೆ ಕಾರಣವೇನು ಗೊತ್ತಾ?!

 

ad

ಒಂದೆಡೆ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಸಿಎಂ ಆಗುತ್ತಿರುವುದಕ್ಕೆ ಜನ ಖುಷಿ ಪಟ್ರೆ ಮತ್ತೊಂದೆಡೆ ಉಪಚುನಾವಣೆ ಬರುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಗೆಲುವು ಸಾದಿಸಿದ್ದ ಹೆಚ್​ಡಿಕೆ ಈಗ ರಾಮನಗರವನ್ನ ಕೈ ಬಿಟ್ಟಿದ್ದಾರೆ. ಇದು ಜನರ ಕೋಪಕ್ಕೆ ಎಡೆ ಮಾಡ್ಕೊಟ್ಟಿದ್ದು, ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ದಿಸಿ ರಾಜಿನಾಮೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಇದೆ. ಮತದಾರನ ಮತಕ್ಕೆ ಬೆಲೆ ಇಲ್ಲವೆ ಎಂದು ಮತದಾರ ಪ್ರಶ್ನೆ ಮಾಡ್ತಿದ್ದು, ಮುಂದಿನ ದಿನಗಳಲ್ಲಿ ಇವೆಲದಕ್ಕು ಬ್ರೇಕ್ ಹಾಕಬೇಕು ಅಂತ ಸಾರ್ವಜಿಕರು ಆಗ್ರಹಿಸುತ್ತಿದ್ದಾರೆ

ಆದರೇ ಸಿಎಂ ಕುಮಾರಸ್ವಾಮಿ ಈಗಾಗಲೇ ರಾಮನಗರ ಕ್ಷೇತ್ರವನ್ನು ಮರಳಿ ಮತ್ತೆ ತಮ್ಮ ತೆಕ್ಕೆಗೆ ಪಡೆದುಕೊಳ್ಳಲು ಈಗಾಗಲೇ ರಣತಂತ್ರವನ್ನು ಸಿದ್ಧಪಡಿಸಿದ್ದಾರೆ. ಹೌದು ಕುಮಾರಸ್ವಾಮಿಯವರಿಗೆ ಇರುವ ಜನಬೆಂಬಲವನ್ನು ಬಳಸಿಕೊಂಡು ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದು, ಶಾಸಕರಾಗಲಿದ್ದಾರೆ. ಎಚ್​ಡಿಕೆ ಕುಟುಂಬವೇನೋ ರಾಜಕೀಯ ಬೆಳವಣಿಗೆಗೆ ಕ್ಷೇತ್ರ ಬಳಸಿಕೊಳ್ಳುತ್ತಿದೆ. ಆದರೇ ಕ್ಷೇತ್ರದ ಜನ ಮಾತ್ರ ಮರಳಿ ಬರುತ್ತಿರುವ ಚುನಾವಣೆಗೆ ಅಸಮಧಾನಗೊಂಡಿದ್ದಾರೆ.